ಮಂಗಳೂರು, ಆ. 24 (DaijiworldNews/SM): ಹಲವು ದಿನಗಳಿಂದ ಅಪ್ಘಾನಿಸ್ತಾನದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಳ್ಳಾಲ ಮೂಲದ ಡೆನ್ಸಿ ಮೊಂತೇರೊ ಇದೀಗ ತಾಯ್ನಾಡಿಗೆ ಮರಳಿದ್ದಾರೆ.
ಡೆನ್ಸಿ ಅವರು ಇದೀಗ ಉಳ್ಳಾಲದ ಉಳಿಯದ ಮನೆಗೆ ತಲುಪಿದ್ದಾರೆ. ಸಹೋದರ ಮೆಲ್ವಿನ್ ಮೊಂತೇರೊ ಆ.17 ರಂದು ಮನೆಗೆ ತಲುಪಿದ್ದರು. ಡೆನ್ಸಿ ಕಾಬೂಲ್ ನಿಂದ ಕತಾರ್ ಗೆ ಏರ್ ಲಿಫ್ಟ್ ಆಗಿದ್ದರು. ಕತಾರ್ ನಲ್ಲಿ ಮೂರು ದಿನಗಳ ಕಾಲ ಉಳಿದಿದ್ದರು. ಇದೀಗ ಕತಾರ್ ನಿಂದ ಭಾರತಕ್ಕೆ ಡೆನ್ಸಿ ಮೊಂತೇರೊ ಆಗಮಿಸಿದ್ದಾರೆ.
ಡೆನ್ಸಿ ಅಮೆರಿಕನ್ ಮಿಲಿಟರಿ ಬೇಸ್ ಕಂಪೆನಿಯಲ್ಲಿ ಐದು ವರ್ಷಗಳಿಂದ ಎ.ಸಿ. ಟೆಕ್ನಿಷೀಯನ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇನ್ನು ತಮ್ಮ ಅನುಭವ ಹಂಚಿಕೊಂಡಿರುವ ಅವರು, ಕೆಲಸದ ಪ್ರದೇಶದಲ್ಲೂ ಕಷ್ಟವಾಗಿದೆ, ಗಾಬರಿಯಲ್ಲಿದ್ದೆವು. ರಾಯಭಾರಿ ಕಚೇರಿ, ಕಂಪೆನಿ ಸಹಕಾರದಿಂದ ಊರಿಗೆ ಮರಳಿದ್ದೇವೆ. ಅಮೇರಿಕಾ ಸೇನೆಯ ದಾಳಿಯನ್ನು ಕಣ್ಣಾರೆ ಕಂಡಿದ್ದೇವೆ. ಆ.15 ರಂದು ಆಕಾಶ, ನೆಲಕ್ಕೆ ಅಮೇರಿಕಾ ಸೇನೆ ಗುಂಡು ಹಾರಿಸಿದ್ದರು. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೇರಿಕಾ ಸೇನೆ ಗುಂಡು ಹಾರಿಸಿತ್ತು. ಅಫ್ಗಾನ್ ನಾಗರಿಕರ ನುಗ್ಗುತ್ತಿರುವುದನ್ನು ತಡೆಯಲು ಗುಂಡು ಹಾರಿಸಿದ್ದರು.
ಘಟನೆಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದರು. ಮೂರು ದಿನಗಳ ಕಾಲ ವಿಮಾನ ನಿಲ್ದಾಣದಲ್ಲೇ ಏರ್ ಲಿಪ್ಟ್ ಗಾಗಿ ಒಂದು ಹೊತ್ತಿನ ಊಟ ಸೇವಿಸಿ ಏರ್ ಲಿಪ್ಟ್ ಗಾಗಿ ಕಾಯುತ್ತಿದ್ದೆವು ಎಂಬುವುದಾಗಿ ಅಪ್ಘಾನಿಸ್ತಾನದ ಭಾಯಾನಕ ಸಂಗತಿಯನ್ನು ಡೆನ್ಸಿ ಮೊಂತೇರೊ ತೆರೆದಿಟ್ಟಿದ್ದಾರೆ.