ಮಂಗಳೂರು, ಆ 24 (DaijiworldNews/MS): ರಾವ್ ಅಂಡ್ ರಾವ್ ಸರ್ಕಲ್ ರಸ್ತೆಯಲ್ಲಿರುವ ಸ್ಟಾರ್ ಟವರ್ ಬಳಿ ಆಗಸ್ಟ್ 24ರ ಮಂಗಳವಾರ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ.
ಪೊಲೀಸರ ಪ್ರಕಾರ, ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ವರದಿ ಪ್ರಕಾರ, ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯ ವಯಸ್ಸು 45 ವರ್ಷ ಎಂದು ಅಂದಾಜಿಸಲಾಗಿದೆ. ಮೃತನ ಬಲಗೈ 'ಆರ್ ಎಸ್', 'ಓಂ' ಮತ್ತು ನಕ್ಷತ್ರದ ಹಚ್ಚೆ ಇದೆ.
ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದೇಹದ ಮೇಲೆ ಯಾವುದೇ ಬಾಹ್ಯ ಗಾಯಗಳಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.