ಮಂಗಳೂರು: ದಕ್ಷಿಣ ಕನ್ನಡವನ್ನು ವಿದ್ಯಾವಂತರ, ಬುದ್ದಿವಂತರ ಜಿಲ್ಲೆ ಎಂದು ಕರೆಯುವುದು ಸಾಮಾನ್ಯ. ಈ ಮಾತಿನ ಹಿಂದೆ ಮಂಗಳೂರು ವಿಶ್ವವಿದ್ಯಾನಿಲಯದ ಶ್ರಮ ಖಂಡಿತ ಇದೆ. ಕರಾವಳಿಗೆ ಮುಕುಟ ಪ್ರಾಯವಾಗಿರುವ ”ಮಂಗಳೂರು ವಿಶ್ವವಿದ್ಯಾಲಯ”ಕ್ಕೆ 150 ರ ಸಂಭ್ರಮ. 1968 ರಲ್ಲಿ ಸ್ಥಾಪನೆಯಾದ ವಿವಿಯೂ 2018ಕ್ಕೆ 150ರ ಹರೆಯಕ್ಕೆ ಕಾಲಿಡುತ್ತಿದೆ.
ಸ್ವತಂತ್ರ್ಯ ಪೂರ್ವದಲ್ಲಿ ಅಂದರೆ ಸುಮಾರು 1860ರ ದಶಕದಲ್ಲಿ ಕರಾವಳಿ ಭಾಗದ ಜನರಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ,ಮದ್ರಾಸ್ ನ್ನು
ಅವಲಂಬಿಸೋದು ಅನಿರ್ವಾಯವಾಗಿತ್ತು. ಆಗಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಮುಖ್ಯಸ್ಥ ಮಿಸ್ಟರ್ ಪಾವೆಲ್ ರಿಂದ್ ಮಂಜೂರುಗೊಂಡ ವಿದ್ಯಾಸಂಸ್ಥೆ ಇಂದಿನವರೆಗೂ ,ವಿದ್ಯಾದಾನದ ಮೂಲಕ ನಿರಂತರ ಯಾನ ಮುಂದುವರಿಸಿದೆ.
ವಿಶ್ವವಿದ್ಯಾಲಯ ಸುಮಾರು 315 ಜನ ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ ಶಾಲೆ, 1870ರಲ್ಲಿ ತನ್ನದೇ ಸ್ವಂತ ಕಟ್ಟಡವನ್ನು ಹೊಂದಿತು. "ಸರಕಾರಿ ಕಾಲೇಜು ಮಂಗಳೂರು" ಎಂದು ಹೆಸರಿನಿಂದ ಕರೆಯುತ್ತಿದ್ದ ಕಾಲೇಜಿಗೆ ಮೊದಲು ಹೆಣ್ಣುಮಕ್ಕಳ ಪ್ರವೇಶವಾಗಿದ್ದು 1902 ರಲ್ಲಿ. ಇನ್ನು ಮೊದಲ ಬಾರಿಗೆ ಕಾಲೇಜು ವಾರ್ಷಿಕೋತ್ಸವ ಆಚರಿಸಿದ್ದು ಮಾರ್ಚ್ 18, 1905 ರಲ್ಲಿ . ಕಳೆದ 149 ವರ್ಷಗಳಿಂದ ಇಲ್ಲಿ ವಿದ್ಯಾಬ್ಯಾಸ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಲಕ್ಷಾಂತರ..
ಡಾ.ಶಿವರಾಮ ಕಾರಂತ, ಡಾ. ಎಂ ವೀರಪ್ಪ ಮೊಯಿಲಿ, ರಮಾನಾಥ್ ರೈ, ಸಂತೋಷ್ ಕುಮಾರ್ ಗುಲ್ವಾಡಿ, ಉದ್ಯಮಿ ದಯಾನಂದ್ ಪೈ, ಸಾಹಿತಿ ಡಾ. ಡಿ ಕೆ ಚೌಟ, ಇಬ್ರಾಹಿಂ ಬ್ಯಾರಿ , ಬ್ರಿಗೇಡಿಯರ್ ಗೋಖಲೆ, ಕಮಲ ದೇವಿ ಚಟ್ಟೋಪಧ್ಯಾಯ ಹೀಗೆ ಇಲ್ಲಿ ಕಲಿತ ಗಣ್ಯರ ಪಟ್ಟಿಯೇ ಬಹಳ ದೊಡ್ಡದಿದೆ.
ಜ್ಞಾನದ ದೀವಿಗೆ ಬೆಳಗಿಸಿ, ಲಕ್ಷಾಂತರ ವಿದ್ಯಾರ್ಥಿಗಳ ಬಾಳನ್ನು ಹಸನಾಗಿಸಿದ ಸಂಸ್ಥೆ150 ನೇ ವರ್ಷದ ಜನ್ಮದಿನದ ಸಂಭ್ರಮದಲ್ಲಿದೆ. ಸಮಾಜಕ್ಕೆ ಸ್ಪೂರ್ತಿ ತುಂಬಬಲ್ಲ ಈ ವಿಶ್ವವಿದ್ಯಾಲಯ ಇನ್ನೊಂದಿಷ್ಟು ಹೊಸ ಭಾಷ್ಯಗಳಿಗೆ ಕಾರಣವಾಗಲಿ ಎನ್ನುವುದೇ ಎಲ್ಲರ ಹಾರೈಕೆ.