ಮಂಗಳೂರು, ಆ.23 (DaijiworldNews/HR): ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಮಂಗಳೂರು ನಗರ ದಕ್ಷಿಣ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ಮಂಗಳೂರು ನಗರದ 2 ಹಿಂದೂ ರುದ್ರಭೂಮಿಯಲ್ಲಿ, ನಿರಂತರವಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವ ಸ್ಮಶಾನದ ನೌಕರರೊಂದಿಗೆ ರಕ್ಷಾ ಬಂಧನ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಕಾಮತ್, ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಹೋರಾಡಿದ ಪ್ರತಿಯೊಬ್ಬರನ್ನು ಕೂಡ ಗೌರವಿಸುವುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ಪಕ್ಷದ ನಿರ್ಧಾರದಂತೆ ಮಹಿಳಾ ಮೋರ್ಚಾದ ಕಾರ್ಯಕರ್ತರು ಸ್ಮಶಾನದ ನೌಕರರೊಂದಿಗೆ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೊರೋನಾ 2ನೆ ಅಲೆಯ ಸಂದರ್ಭದಲ್ಲಿ ಸುಮಾರು 100ಕ್ಕೂ ಹೆಚ್ಚು ಶವಸಂಸ್ಕಾರವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿದ ಮ.ನ.ಪಾ.ಸದಸ್ಯರಾದ ಗಣೇಶ್ ಕುಲಾಲ್, ಮತ್ತು ನಗರದ ಬರ್ಕೆ ಪೊಲೀಸ್ ಸ್ಟೇಷನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಯವರಿಗೆ ಮತ್ತು ಅಲ್ಲಿನ ಸಿಬ್ಬಂದಿ ವರ್ಗದವರಿಗೆ ರಕ್ಷೆಯನ್ನು ಕಟ್ಟಿ ಸಿಹಿ ಹಂಚಿ ವಿಶಿಷ್ಟವಾಗಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಂಗಳೂರು ನಗರ ದಕ್ಷಿಣ ಮಂಡಲದ ಅಧ್ಯಕ್ಷರಾದ ವಿಜಯಕುಮಾರ್ ಶೆಟ್ಟಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಪೂರ್ಣಿಮಾ ರಾವ್, ಮಂಡಲದ ಪ್ರಧಾನ ಕಾರ್ಯದರ್ಶಿ ರೂಪಾ. ಡಿ. ಬಂಗೇರ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಧನಲಕ್ಷ್ಮಿ ಗಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಆಶಾ. ಡಿ .ಸಿಲ್ವಾ, ರೂಪಾ ಧರ್ಮಯ್ಯ,ಉತ್ತರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರಮೇಶ್ ಹೆಗ್ಡೆ, ಪಶ್ಚಿಮ ಮಹಾ ಶಕ್ತಿ ಕೇಂದ್ರ ದ ಅಧ್ಯಕ್ಷರಾದ ದೀಪಕ್ ಪೈ , ಮಹಾನಗರ ಪಾಲಿಕೆ ಸದಸ್ಯರಾದ ಜಗದೀಶ್ ಶೆಟ್ಟಿ, ಮ.ನ.ಪಾ ಸದಸ್ಯರಾದ ಶೈಲೇಶ್ ಶೆಟ್ಟಿ, ಮ.ನ.ಪಾ ಸದಸ್ಯರಾದ ಶ್ರೀಮತಿ ಲೀಲಾವತಿ ಪ್ರಕಾಶ್, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ನರ್ಮದಾ ರೈ, ಹರಿಣಿ ಪ್ರೇಮ್,ಪದಾಧಿಕಾರಿಗಳಾದ ಶ್ರೀದೇವಿ ಆಚಾರ್ಯ, ಗಾಯತ್ರಿ ಲೋಕೇಶ್, ಪ್ರಿಯಾ ಕೋಟ್ಯಾನ್, ರೂಪ, ಮಾಲತಿ, ಪುಷ್ಪಾ ಶೆಟ್ಟಿ,ಮಮತಾ, ಕವಿತಾ ,ಗೀತಾ ಮತ್ತು ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷರಾದ ಅನಿಲ್, ಮಂಡಲದ ಕಾರ್ಯದರ್ಶಿ ವಿನೋದ್ ಮೆಂಡನ್ ಮಹಾಶಕ್ತಿ ಕೇಂದ್ರದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.