ಕಾಸರಗೋಡು, ಆ. 22 (DaijiworldNews/HR): ಜಿಲ್ಲೆಯಲ್ಲಿ ಭಾನುವಾರ 243 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 538 ಮಂದಿ ಗುಣಮುಖರಾಗಿದ್ದಾರೆ.
ಸಾಂಧರ್ಭಿಕ ಚಿತ್ರ
ಜಿಲ್ಲೆಯಲ್ಲಿ 4,733 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 19, 857 ಮಂದಿ ನಿಗಾದಲ್ಲಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಇದುವರೆಗೆ ಸೋಂಕಿತರ ಪ್ರಮಾಣ 1,19,728 ಕ್ಕೆ ತಲಪಿದ್ದು, 1,14,728 ಮಂದಿ ಗುಣಮುಖರಾಗಿ ಒಟ್ಟು 422 ಮಂದಿ ಮೃತಪಟ್ಟಿದ್ದಾರೆ.
ಕೇರಳದಲ್ಲಿ 10,402 ಮಂದಿಗೆ ಸೋಂಕು ದೃಢಪಟ್ಟಿದೆ.