ಕಾಸರಗೋಡು, ಆ. 22 (DaijiworldNews/HR): ಬೈಕ್ ಮತ್ತು ಓಮ್ನಿ ನಡುವೆ ಉಂಟಾದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಪೈವಳಿಕೆ ಸಮೀಪದ ಬಾಯಿಕಟ್ಟೆಯಲ್ಲಿ ನಡೆದಿದೆ.
ಮೃತಪಟ್ಟವರನ್ನು ಚಿಪ್ಪಾರ್ ಸೋಕೆಯ ಮುಝಾಮ್ಮಿಲ್(19) ಎಂದು ಗುರುತಿಸಲಾಗಿದೆ.
ಬಾಯಿಕಟ್ಟೆ ಚೆಕ್ ಪೋಸ್ಟ್ ಬಳಿ ಅಪಘಾತ ನಡೆದಿದ್ದು, ಮೃತ ದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿರಿಸಲಾಗಿದೆ.
ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.