ಮಂಗಳೂರು, ಆ. 21 (DaijiworldNews/HR): ಪದವು ಕುಲಶೇಖರ ಚೌಕಿ ಎಂಬಲ್ಲಿರುವ ಕಾಂಚನಾ ಗಂಗಾ ಟ್ರೇಡರ್ಸ್ ಎಂಬ ಗೋದಾಮಿನ ಕೊಠಡಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಸ್ಪೋಟಕ ವಸ್ತುವಾದ ಪಟಾಕಿಯನ್ನು ಮಾರಾಟ ಮಾಡುತ್ತಿರುವ ಬಗ್ಗೆ ಪೋಲಿಸರಿಗೆ ಮಾಹಿತಿ ಲಭಿಸಿದ್ದು, ಓರ್ವನನ್ನು ಬಂಧಿಸಲಾಗಿದೆ.
ಯಾವುದೇ ಪರವಾನಿಗೆ ಇಲ್ಲದೇ ಸ್ಪೋಟಕ ವಸ್ತುವಾದ ಪಟಾಕಿಯನ್ನು ಮಾರಾಟ ಮಾಡಿತ್ತಿರುವ ಮಾಹಿತಿ ತಿಳಿದು ಕಂಕನಾಡಿ ನಗರ ಠಾಣಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ 4,31,630 ರೂಪಾಯಿ ಮೌಲ್ಯದ ಸ್ಫೋಟಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಇನ್ನು ಓರ್ವನನ್ನು ಬಂಧಿಸಲಾಗಿದ್ದು, ಈ ಪ್ರಕರಣವನ್ನು ಮಾಜಿಸ್ಟ್ರೇಟ್ ತನಿಖೆಗೆ ವಹಿಸಲಾಗಿದೆ.
ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.