ಮಂಗಳೂರು, ಅ 11: ಪ್ರಜಾಸತ್ತಾತ್ಮಕ ಹಕ್ಕೊತ್ತಾಯಕ್ಕಾಗಿ ಮಂಗಳೂರಿನ ನೆಹರೂ ಮೈದಾನದಲ್ಲಿ ಅಕ್ಟೋಬರ್ 13 ರಂದು ಬೃಹತ್ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ ತಿಳಿಸಿದೆ. ಇಂದು ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಸಂಘಟನೆಯ ಮುಖಂಡ ಕೆ ಅಶ್ರಫ್ , ಬಂಟ್ವಾಳ ಪೊಲೀಸರಿಂದ ಧಾರ್ಮಿಕ ಗ್ರಂಥ ಕುರಾನ್ ನ ಮೌಲ್ಯ ಚ್ಯುತಿಯಾಗಿದೆ ಮತ್ತು ಮಾದ್ಯಮ ಧ್ವನಿ ಹತ್ತಿಕ್ಕುವ ಪೊಲೀಸ್ ಇಲಾಖೆಯ ವಿರುದ್ದ ಈ ಪ್ರತಿಭಟನೆಯನ್ನು ಆಯೋಜಿಸಲಾಗಿದ್ದು ಶಾಂತಿಯುತವಾಗಿ ಈ ಸಭೆ ನಡೆಯಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಸುಹೈಲ್ ಕಂದಕ್, ಹಮೀದ್ ಕುದ್ರೋಳಿ ಮತ್ತಿತರರು ಉಪಸ್ಥಿತರಿದ್ದರು.