ಮಂಗಳೂರು ಅ 11: ಮುದ್ರಾ ಯೋಜನೆ ಪ್ರಚಾರ ಅಭಿಯಾನಕ್ಕಾಗಿ ಅಕ್ಟೋಬರ್ 16 ರಂದು ಕೇಂದ್ರ ರಾಜ್ಯ ಖಾತೆಯ ಸಚಿವ ಅನಂತ್ ಹೆಗಡೆ ಚಾಲನೆ ನೀಡಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ಅವರು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ ಪ್ರಧಾನ ಮಂತ್ರಿಯ ಮುದ್ರಾ ಯೋಜನೆಯೂ ಸಣ್ಣ ಉದ್ದಿಮೆಗಳಿಗೆ ಆರ್ಥಿಕ ಸಹಾಯ ಮತ್ತು ಸ್ವ ಉದ್ಯೋಗ ಕಲ್ಪಿಸುವ ಉದ್ದೇಶದಿಂದ, ಇದರ ಬಗ್ಗೆ ಅರಿವನ್ನು ಮೂಡಿಸಲು ಮಂಗಳೂರಿನ ಪುರಭವನದಲ್ಲಿ ಮುದ್ರಾ ಪ್ರಚಾರ ಅಭಿಯಾನ ನಡೆಯಲಿದೆ ಎಂದರು.
ಇನ್ನು ದಕ್ಷಿಣ ಕನ್ನಡದಲ್ಲಿ 59408 ಫಲಾನುಭವಿಗಳಿದ್ದು, ಮಂಗಳೂರಿನಲ್ಲಿ ಇದು ಯಶಸ್ವಿಯಾದರೂ ಕೂಡಾ, ಬಹಳಷ್ಟು ಜನರಿಗೆ ಸೂಕ್ತ ಮಾಹಿತಿ ಇಲ್ಲ. ಈ ಅಭಿಯಾನದಲ್ಲಿ 30 ಬ್ಯಾಂಕ್ ಗಳ ಸ್ಟಾಲ್ ಗಳು ಇರಲಿದ್ದು ಜನ್ ಧನ್ ಯೋಜನೆ, ಸ್ಟೆಂಡ್ ಅಪ್ ಯೋಜನೆಗಳ ಬಗ್ಗೆಯೂ ಮಾಹಿತಿ ಇಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದರು.