ಮಂಗಳೂರು, ಅ 28 (MSP): ಮಂಗಳೂರಿಗೂ ಎಟಿಎಂ ಸ್ಕಿಮ್ಮಿಂಗ್ ದಂಧೆಕೋರರು ಕಾಲಿರಿಸಿದ್ದು, ಸ್ಕಿಮ್ಮಿಂಗ್ ನಡೆಸಿ ವಂಚನೆ ಎಸಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಪೊಲೀಸರು ಎಟಿಎಂಗಳ ದಿಢೀರ್ ತಪಾಸಣೆ ಆರಂಭಿಸಿದ್ದಾರೆ.
ಅ.26 ರ ಶುಕ್ರವಾರ ರಾತ್ರಿ ಪೊಲೀಸರು ವಿಧ ಎಟಿಎಂಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು. ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿಗಳೇ ಇಲ್ಲದಿರುವುದು ಮತ್ತು ಸೆಕ್ಯೂರಿಟಿ ಗಾರ್ಡ್ ಇದ್ದರೂ ಹಲವೆಡೆ ನಿಷ್ಕ್ರೀಯರಾಗಿರುವುದು ಅಥವಾ ನಿದ್ದೆಯಲ್ಲಿರುವುದು ಕಂಡಬಂದಿದೆ . ಇದರೊಂದಿಗೆ ಸಿಸಿ ಟಿವಿಗಳ ಸರಿಯಾಗಿ ಕೆಲ ಮಾಡದೇ ಇರುವುದು ಇತ್ಯಾದಿ ಕಾರಣಗಳಿಂದ ಕಳ್ಳರಿಗೆ ಎಟಿಎಂ ಸ್ಕಿಮ್ಮಿಂಗ್ ಮಾಡಲು ಅನುಕೂಲಕರವಾಗಿರುವುದು ಕಂಡು ಬಂದಿದೆ. ಈ ಹಿನ್ನಲೆಯ್ಯಲಿ ದಿಢೀರ್ ತಪಾಸಣೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಕಮೀಷನರ್ ಟಿ.ಎರ್ ಸುರೇಶ್ ತಿಳಿಸಿದ್ದಾರೆ.
ಈ ನಡುವೆ ರಾಜೇಶ್ ಎಂ.ಕಲ್ಲಿ ಅವರ ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಖಾತೆಯಿಂದ ಅ.13.ರಂದು ವಂಚಕರು ಅಕೌಂಟ್ ಹ್ಯಾಕ್ ಮಾಡಿ 80,000 ರೂ ಡ್ರಾ ಮಾಡಿದ ಬಗ್ಗೆ ಮಂಗಳೂರಿನ ಸೈಬರ್ ಕ್ರೈಂ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.