ಮಂಗಳೂರು ಆ 19 (DaijiworldNews/MS): ಕೊವೀಡ್ ಕಾರಣದಿಂದ ಕಳೆದ ಕೆಲವು ತಿಂಗಳಿನಿಂದ ಸ್ಥಗಿತವಾಗಿದ್ದ ಮಂಗಳೂರು-ಯುಎಇ ವಿಮಾನ ಸಂಚಾರ ಬುಧವಾರದಿಂದ ಮತ್ತೆ ಪುನರಾಂಭವಾಗಿದೆ. ಆ. 18 ರ ಬುಧವಾರ ಅಪರಾಹ್ನ ಏರ್ ಇಂಡಿಯಾ ಎಕ್ಸ್ಪ್ರೆಸ್ ಯುಎಇಗೆ ಹಾರಾಟ ಪ್ರಾರಂಭಿಸಿದೆ.
ಯುಎಇಗೆ ತೆರಳುವ ಪ್ರಯಾಣಿಕರು ವಿಮಾನ ಏರುವ ಆರು ಗಂಟೆಗಳೊಳಗೆ ವಿಮಾನ ನಿಲ್ದಾಣದಲ್ಲಿ ನೆಗೆಟಿವ್ ರ್ಯಾಪಿಡ್ ಆರ್ಟಪಿಸಿಆರ್ ಪರೀಕ್ಷೆಗೊಳಪಡಬೇಕಿದೆ. ಅದರಂತೆ ಪರೀಕ್ಷೆಯೊಂದಿಗೆ ಪ್ರಯಾಣಿಕರು ಯುಎಇಗೆ ಪ್ರಯಾಣ ಆರಂಭಿಸಿದ್ದಾರೆ. ಹೀಗಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಏರ್ಪೋರ್ಟ್ನಲ್ಲಿ ಪ್ರಯಾಣಿಕರ ಸಂಖ್ಯೆ ಹಂತ ಹಂತವಾಗಿ ಏರಿಕೆಯಾಗುತ್ತಿದ್ದು ಆ. 1ರಿಂದ 15ರ ವರೆಗೆ 12,717 ಪ್ರಯಾಣಿಕರು ದೇಶೀಯ ವಿಮಾನಗಳ ಮೂಲಕ
ನಿರ್ಗಮಿಸಿದ್ದಾರೆ. ಇದೇ ಸಮಯ 13,924 ಪ್ರಯಾಣಿಕರು ಮಂಗಳೂರಿಗೆ ಬಂದಿಳಿದಿದ್ದಾರೆ.
ಜುಲೈ 1 ರಿಂದ 15 ರವರೆಗೆ 8,495 ಪ್ರಯಾಣಿಕರಿಗೆ ಹೋಲಿಸಿದರೆ - ಶೇಕಡಾ 64 ರಷ್ಟು ಹೆಚ್ಚಳವಾಗಿದೆ. ಆಗಸ್ಟ್ ತಿಂಗಳ ಆರಂಭದಿಂದಲೇ ದೇಶೀಯ ವಿಮಾನಯಾನದಲ್ಲಿ ಕ್ಷಿಪ್ರ ಬೆಳವಣಿಗೆಯ ಜತೆಗೆ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.