ತನ್ನ ದೇಶದಲ್ಲಿ ಈತ ಆಗರ್ಭ ಶ್ರೀಮಂತ ಆದರೆ ಪರಿಸ್ಥಿತಿ ಹೇಗೆ ಬದಲಾಯಿತು ಅಂದರೆ ಬಿಕ್ಷೆ ಬೇಡೋ ತನಕ. ಹಾಗೆಂದು ಈತ ದಿವಾಳಿಯಾದದ್ದಲ್ಲ. ರಷ್ಯಾದ ಈ ಯುವಕನ ಹೆಸರು ಇವಾಂಗೆಲಿನ್ ಪ್ರವಾಸಕ್ಕೆಂದು ಭಾರತಕ್ಕೆ ಬಂದಾಗ ಎಟಿಂಎಂ ಕೈ ಕೊಟ್ಟು, ಕೈಯಲ್ಲಿ ಬಿಡಿಗಾಸು ಇಲ್ಲದೆ, ಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣವಾಗುತ್ತದೆ. ದಿಕ್ಕು ತೋಚದೆ ಕಾಂಚೀಪುರಂನ ಕುಮಾರಕೊಟ್ಟಂ ಶ್ರೀಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ಭಿಕ್ಷೆ ಬೇಡಲು ಕುಳಿತಿದ್ದಾನೆ. ಆದರೆ ಪೊಲೀಸರು ಬಿಡಬೇಕಲ್ಲ. ವಿಷಯ ತಿಳಿದ ತಕ್ಷಣ ಪೊಲೀಸರು ಠಾಣೆಗೆ ಕರೆಯಿಸಿ ವಿಚಾರಣೆ ಪ್ರಾರಂಭಿಸಿದ್ದಾರೆ. ಎಟಿಎಂ ನಲ್ಲಿ ದುಡ್ಡು ಡ್ರಾ ಮಾಡಲು ಹೋದಾಗ ಎಟಿಎಂ ಮಿಷನ್ ಒಳಗೆ ಹೋದಾ ಕಾರ್ಡ್ ವಾಪಸ್ ಬರಲೇ ಇಲ್ಲ ದಿಕ್ಕು ತೋಚದೆ ಹಣಕ್ಕಾಗಿ ಬಿಕ್ಷೆಗೆ ಕುಳಿತ ವಿಷಯ ತಿಳಿಸಿದ್ದಾನೆ.ಕೊನೆಗೆ ಪೊಲೀಸರು ಒಂದಿಷ್ಟು ಧನ ಸಹಾಯ ಮಾಡಿದ್ದಾರೆ. ಚೆನ್ನೈಗೆ ಹೋಗಿ ರಷ್ಯಾ ರಾಯಭಾರಿ ಕಚೇರಿಯನ್ನು ಸಂಪರ್ಕಿಸುವಂತೆ ಸಲಹೆ ನೀಡಿದ್ದಾರೆ. ಇನ್ನೊಂದೆಡೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇವಾಂಗೆಲಿನ್ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಸದ್ಯ ಯುವಕ ನಿಟ್ಟಿಸಿರುಬಿಟ್ಟಿದ್ದಾನೆ.