ಕಾಸರಗೋಡು, ಆ.16 (DaijiworldNews/HR): ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಥಮ ಆರೋಪಿ ಟಿ.ಕೆ ಪೂಕೋಯ ತಂಙಲ್ ಹಾಗೂ ಎರಡನೇ ಆರೋಪಿ ಮಂಜೇಶ್ವರ ಮಾಜಿ ಶಾಸಕ ಎಂ.ಸಿ ಕಮರುದ್ದೀನ್ನನ್ನು ಕ್ರೈಂ ಬ್ರಾಂಚ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಕಾಸರಗೋಡು ಕ್ರೈಂ ಬ್ರಾಂಚ್ ಪೊಲೀಸರು ಇಬ್ಬರನ್ನು ಜೊತೆಯಲ್ಲಿ ಇರಿಸಿ ವಿಚಾರಣೆ ನಡೆಸಲಾಗುತ್ತಿದೆ.
ಖಮರುದ್ದೀನ್ನನ್ನು ಕಳೆದ ನವಂಬರ್ ನಲ್ಲಿ ಬಂಧಿಸಲಾಗಿತ್ತು. ಆದರೆ ತಲೆ ಮರೆಸಿಕೊಂಡಿದ್ದ ಟಿ.ಕೆ ಪೂಕೋಯ ತಂಙಲ್ ವಾರದ ಹಿಂದೆ ಹೊಸದುರ್ಗ ನ್ಯಾಯಾಲಯಕ್ಕೆ ಶರಣಾಗಿದ್ದನು.
ಇನನು ಸುಮಾರು 750 ರಷ್ಟು ಗ್ರಾಹಕರಿಂದ 150 ಕ್ಕೂ ಅಧಿಕ ಕೋಟಿ ರೂ. ಪಡೆದು ವಂಚನೆ ನಡೆಸಿರುವುದಾಗಿ 130 ಕ್ಕೂ ಅಧಿಕ ದೂರುಗಳು ಲಭಿಸಿವೆ.