ಸುಳ್ಯ, ಆ 16 (DaijiworldNews/PY): ದೇಶದೆಲ್ಲೆಡೆ ಆಗಸ್ಟ್ 15ರಂದು 75ನೇ ಸ್ವಾತಂತ್ರ್ಯೋವವನ್ನು ಆಚರಿಸಲಾಯಿತು. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಏರಣಗುಡ್ಡೆಯಲ್ಲಿ ದೈನದಿಂನ ಕೆಲಸಕ್ಕೆ ಹೊರಟಿದ್ದ ಮಹಿಳೆಯೋರ್ವರು ಚಪ್ಪಲಿ ಕಳಚಿಟ್ಟು ಧ್ವಜಕ್ಕೆ ಸೆಲ್ಯೂಟ್ ಮಾಡಿದ ಫೋಟೋ ವೈರಲ್ ಆಗಿದೆ.
ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸುಳ್ಯದ ಗಾಂಧಿ ವಿಚಾರ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮ ಮುಗಿದ ಬಳಿಕ ಅದೇ ದಾರಿಯಲ್ಲಿ ತನ್ನ ದೈನಂದಿನ ಕೆಲಸಕ್ಕೆ ಹೊರಟ್ಟಿದ್ದ ಮಹಿಳೆ ಧ್ವಜವನ್ನು ಕಂಡು, ಧ್ವಜಕ್ಕೆ ಸೆಲ್ಯೂಟ್ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಮಾನ್ಯ ಮಹಿಳೆಯೋರ್ವರ ದೇಶಪ್ರೇಮದ ಫೋಟೋಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ, "ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮದ ನಂತರ ತನ್ನ ದೈನಂದಿನ ಕೆಲಸಕ್ಕೆ ಹೊರಟಿದ್ದ ಮಾತೆಯೊಬ್ಬರು ರಾಷ್ಟ್ರಧ್ವಜವನ್ನು ಕಂಡು, ಚಪ್ಪಲಿ ತೆಗೆದು ಧ್ವಜಕ್ಕೆ ಸೆಲ್ಯೂಟ್ ಮಾಡಿ ತನ್ನ ಪಾಡಿಗೆ ಕೆಲಸಕ್ಕೆ ಹೊರಟು ಹೋದರಂತೆ. ಇದು ಭಾರತ... ಇದು ಸಂಭ್ರಮ... ಇದು ಶ್ರದ್ಧೆ... ಇದು ಭಕ್ತಿ..." ಎಂದಿದ್ದಾರೆ.