ಉಡುಪಿ, ಆ 14 (DaijiworldNews/MS): ಉಡುಪಿ ಪವರ್ ಕಾರ್ಪೋರೇಷನ್ ಲೀ. ( UPCL ) ಕಂಪೆನಿಯ ನಕಲಿ ನೇಮಕಾತಿ ಲಿಂಕ್ ಸೃಷ್ಟಿಸಿ ವಂಚಿಸಿದ ಘಟನೆ ನಡೆದಿದೆ.
ಆ. 11ರಂದು ಅಪರಿಚಿತ ವ್ಯಕ್ತಿಗಳು https://g.co/kgs/dHyUQY ಎಂಬ ಹೆಸರಿನಲ್ಲಿ ಸದ್ರಿ ಕಂಪೆನಿಯ ನಕಲಿ ನೇಮಕಾತಿ ಲಿಂಕ್ ನ್ನು ಸೃಷ್ಟಿಸಿ, ಸದ್ರಿ ಲಿಂಕ್ ನಲ್ಲಿ ಪಡುಬಿದ್ರಿ ಸಂಸ್ಥೆಗೆ ಬಿಇ ಮಾಡಿದ 18 ರಿಂದ 35 ವರ್ಷದೊಳಗಿನ 23 ಮಂದಿ ಬೇಕಾಗಿದ್ದಾರೆ. 20,000ದಿಂದ 25,000ದವರೆಗೆ ವೇತನ ನೀಡಲಾಗುತ್ತದೆ ಎಂಬುದಾಗಿ ನಮೂದಿಸಿ, ಈ ಬಗ್ಗೆ ಆನ್ಲೈನ್ ಪೇಮೆಂಟ್ ರೂ. 500 ರೂ. ಪಾವತಿಸುವಂತೆ ತಿಳಿಸಲಾಗಿತ್ತು. ಅಲ್ಲದೆ ಈ ಬಗ್ಗೆ ಸಂಪರ್ಕಿಸಲು ಪೋನ್ ನಂಬರ್ ಅನ್ನು ಕೂಡಾ ಸದ್ರಿ ಲಿಂಕ್ ನಲ್ಲಿ ನಮೂದಿಸಲಾಗಿತ್ತು.
ಆದರೆ ಆ ನೇಮಕಾತಿ ಲಿಂಕ್ ಗಳು ಉಡುಪಿ ಪವರ್ ಕಾರ್ಪೋರೇಷನ್ ಲೀ. ಸೃಷ್ಟಿಸಿದ್ದಲ್ಲ, ಸಂಸ್ಥೆಯ ಹೆಸರು ಹಾಳು ಮಾಡುವ ಉದ್ದೇಶದಿಂದ ಅಪರಿಚಿತ ವ್ಯಕ್ತಿಗಳು ನಕಲಿ ಲಿಂಕ್ ಸೃಷ್ಟಿಸಿದ್ದಾರೆ ಎಂದು ಕಂಪೆನಿಯ ಅಸೋಶಿಯೆಟ್ ಜನರಲ್ ಮ್ಯಾನೇಜರ್ ಕೆ. ಶಶಿಧರ್ ಅವರು ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.