ಉಡುಪಿ,ಅ 26 (MSP): ಜಿಲ್ಲಾ ನ್ಯಾಯಾಲಯದ ಆದೇಶದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾದ ಸುಮಾರು 18.895 ಕೆ.ಜಿ. ಗಾಂಜಾವನ್ನು ಎಸ್ಪಿ ಕಚೇರಿಯ ಆವರಣದಲ್ಲಿ ಬೆಂಕಿ ಹಚ್ಚಿ ಸುಟ್ಟು ಹಾಕಲಾಯಿತು.
ಜಿಲ್ಲೆಯ ವಿವಿಧ ಠಾಣೆಗಳಾದ ಮಣಿಪಾಲ, ಉಡುಪಿ ನಗರ ಠಾಣೆ, ಕಾರ್ಕಳ ನಗರ ಠಾಣೆ ಮತ್ತು ಗ್ರಾಮಾಂತರ ಹಾಗೂ ಅಪರಾಧ ಪತ್ತೆ ದಳ ವಿಭಾಗ ಸಹಿತ 15 ಪ್ರಕರಣದಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ಬೆಂಕಿ ಹಚ್ಚಿ ನಾಶಮಾಡಲಾಯಿತು.
ನ್ಯಾಯಲಯದ ಆದೇಶದ ಮೇರೆಗೆ ಎಸ್ಪಿ ಕಛೇರಿ ಅವರಣದಲ್ಲಿ ಗಾಂಜಾ ಸುಡುವ ಸಂದರ್ಭ ಹಿರಿಯ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.