ಮಂಗಳೂರು ಅ10: ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಕೆ.ಜೆ ಜಗದೀಶರನ್ನು ವರ್ಗಾವಣೆಗೊಳಿಸಿ ರಾಜ್ಯಸರಕಾರವು ಅದೇಶ ಹೊರಡಿಸಿದೆ. 2009 ಬ್ಯಾಚಿನ ಐಎ ಎಸ್ ಅಧಿಕಾರಿಯಾಗಿರುವ ಸಸಿಕಾಂತ್ ಸೆಂಥಿಲ್ ಅವರು ದ.ಕ ಜಿಲ್ಲೆಯ ನೂತನ ಜಿಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಡಾ. ಕೆ.ಜೆ ಜಗದೀಶರನ್ನು ಭೂ ಹಾಗೂ ಗಣಿಗಾರಿಕಾ ಇಲಾಖೆಯ ನಿರ್ದೇಶಕರನ್ನಾಗಿ ನೇಮಕಮಾಡಲಾಗಿದ್ದರೆ ಸಸಿಕಾಂತ್ ಸೆಂದಿಲ್ ಇವರಿಗೆ ಇದೇ ಹುದ್ದೆಯಿಂದ ದ.ಕ ಜಿಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಡಾ.ಜಗದೀಶರು 2016 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಸಸಿಕಾಂತ್ ಸೆಂಥಿಲ್(ಎಡ)ಡಾ.ಕೆ.ಜೆ ಜಗದೀಶ್(ಬಲ)
ನೂತನ ಜಿಲ್ಲಾಧಿಕಾರಿ ಸೆಂಥಿಲ್ ರವರು ತಮಿಳುನಾಡು ನಿವಾಸಿಯಾಗಿದ್ದು ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿಯನ್ನು ಹೊಂದಿದ್ದಾರೆ. ಅವರು ಈ ಮೊದಲು ರಾಯಚೂರು ಜಿಲ್ಲಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು.