ಮೂಡುಬಿದಿರೆ, ಆ 12 (DaijiworldNews/PY): ಸೋನಿ ಟಿ.ವಿಯಲ್ಲಿ ನಡೆಯುತ್ತಿರುವ ಇಂಡಿಯನ್ ಐಡಲ್ ರಿಯಾಲಿಟಿ ಶೋನಲ್ಲಿ ಮೂಡುಬಿದಿರೆಯ ನಿಹಾಲ್ ತಾವ್ರೊ ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಆರು ಮಂದಿ ಗಾಯಕರ ಪೈಕಿ ನಿಹಾಲ್ ತಾವ್ರೊ ಅವರೂ ಕೂಡಾ ಒಬ್ಬರಾಗಿದ್ದಾರೆ. ಇವರು ಸ್ಥಳೀಯ, ಪ್ರಾದೇಶಿಕ ಹಾಗೂ ರಾಜ್ಯಮಟ್ಟದ ವಿಜೇತರಾಗಿದ್ದಾರೆ. ಇವರು ಇಂಡಿಯನ್ ಐಡಲ್ ರಿಯಾಲಿಟಿ ಶೋನಲ್ಲಿರುವ ಏಕೈಕ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸೋನಿ ಟಿ.ವಿಯಲ್ಲಿ ಆಗಸ್ಟ್ 15ರಂದು ನಡೆಯಲಿರುವ ಫೈನಲ್ ಫಲಿತಾಂಶದ ಬಗ್ಗೆ ಕುತೂಹಲ ಮೂಡಿಸಿದೆ. ಈ ಫೈನಲ್ ಕಾರ್ಯಕ್ರಮದಲ್ಲಿ ಹಲವಾರು ಬಾಲಿವುಡ್ ನಟರು, ಗಾಯಕರು ಭಾಗವಹಿಸಲಿದ್ದಾರೆ.
ನಿಹಾಲ್ ತಾವ್ರೊ ಅವರು ಮೂಡುಬಿದಿರೆ ಅಲಂಗಾರು ಮೂಲದ ಬ್ಯಾಂಕ್ ಉದ್ಯೋಗಿ ಹೆರಾಲ್ಡ್ ತಾವ್ರೊ ಹಾಗೂ ಶಿಕ್ಷಕಿ ಪ್ರೆಸಿಲ್ಲಾ ದಂಪತಿಯ ಪುತ್ರ.
ನಿಹಾಲ್ ತಾವ್ರೊ ಅವರು ಈ ಹಿಂದ ದಾಯ್ಜಿವಲ್ಡ್ ವಾಯ್ಸ್ ಕಾರ್ಯಕ್ರಮದ ವಿಜೇತರಾಗಿದ್ದರು.