ಮಂಗಳೂರು, ಆ 12 (DaijiworldNews/MS): ಪತ್ರಕರ್ತ ಬಿ. ರವೀಂದ್ರ ಶೆಟ್ಟಿ ರಚಿಸಿದ "ನಮ್ಮ ಮಂಗಳೂರು ಪುಸ್ತಕ"ವನ್ನು ಮಂಗಳೂರು ನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಮಂಗಳೂರಿನಲ್ಲಿ ಹಸ್ತಾಂತರಿಸಿದರು. ಮಂಗಳೂರಿನ ಸಮಗ್ರ ಮಾಹಿತಿ ಒಳಗೊಂಡಿರುವ ಪುಸ್ತಕದ ಬಗ್ಗೆ ಸಿಎಂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪುಸ್ತಕದಲ್ಲಿ ಏನೇನಿದೆ?
ಹಿರಿಯ ಪತ್ರಕರ್ತ ಬಿ. ರವೀಂದ್ರ ಶೆಟ್ಟಿ ಬರೆದಿರುವ ‘ನಮ್ಮ ಮಂಗಳೂರು’ ಅತ್ಯಪೂರ್ವ ಮಾಹಿತಿಗಳಿರುವ ಅಪರೂಪದ ಕೃತಿಯಾಗಿದ್ದು, ಮಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳ ಪೂರ್ತಿ ಚಿತ್ರಣ., ದೇವಸ್ಥಾನ, ದೈವಸ್ಥಾನ, ಮಸೀದಿ, ಚರ್ಚ್ ಹೀಗೆ ಎಲ್ಲಾ ಶ್ರದ್ಧಾ ಕೇಂದ್ರಗಳ ವಿವರಗಳನು ಒಳಗೊಂಡಿದೆ.
ಶೈಕ್ಷಣಿಕ ಹಬ್ ಎಂಬ ಹೆಸರುವಾಸಿಯಾಗಿರುವ ಮಂಗಳೂರಿನಲ್ಲಿ ಎಷ್ಟು ಶಾಲೆ, ಕಾಲೇಜು, ವೈದ್ಯಕೀಯ, ಎಂಜೀನಿಯರಿಂಗ್, ವೃತ್ತಿಪರ ಕಾಲೇಜುಗಳ ವಿವರ, ಆಸ್ಪತ್ರೆಗಳ, ಹೊಟೇಲ್್ ಕೆರೆ, ಮಾರುಕಟ್ಟೆ, ಮೈದಾನ, ಪಾರ್ಕ್, ಕ್ರೀಡಾಂಗಣ, ಸ್ಮಶಾನಗಳ ಮಾಹಿತಿಗಳು ಅಡಕವಾಗಿದೆ. ಸಂಸದರು, ಶಾಸಕರು, ಮೇಯರ್, ಉಪಮೇಯರ್, ಕಾರ್ಪೊರೇಟರ್ಗಳ ಸಚಿತ್ರ ವಿವರಗಳು.
ಕಾರ್ಪೊರೇಶನ್ನಿಂದ ನಾಗರಿಕರಿಗೆ ಲಭಿಸುವ ಸೌಲಭ್ಯಗಳೇನು, ಅದನ್ನು ಪಡೆದುಕೊಳ್ಳಲು ಏನೇನು ಮಾಡಬೇಕು ಮಾರ್ಗದರ್ಶಿ ಮಾಹಿತಿಗಳಿ ಇದರಲ್ಲಿದೆ
ಇದಲ್ಲದೆ ಮಂಗಳೂರಿನ ಅಪರೂಪದ ಫೋಟೋಗಳ ಸಂಗ್ರಹ ಪೊಲೀಸ್ ಠಾಣೆ, ಮಾಧ್ಯಮ ಸಂಸ್ಥೆಗಳುಗಳ ದೂರವಾಣಿ ಸಂಖ್ಯೆಗಳು ಯಾವ ನಂಬರ್ನ ಬಸ್ ಎಲ್ಲಿ ಸಂಚರಿಸುತ್ತೆ ಎಂಬ ವಿವರಗಳಿದ್ದು
ಸಂಗ್ರಹಯೋಗ್ಯ ಅಪರೂಪದ ಕೃತಿ ಇದಾಗಿದೆ. ಕೃತಿಗಳಿಗಾಗಿ 9343381791/ 9731976777 ಸಂಪರ್ಕಿಸಬಹುದಾಗಿದೆ.