ಮಂಗಳೂರು,ಆ 12 (DaijiworldNews/SB): ಖ್ಯಾತ ಕೊಂಕಣಿ ಹಾಡುಗಾರರಾದ ಮೆಲ್ವಿನ್ ಪೆರಿಸ್ ಇವರ 109ನೇ ಮ್ಯೂಸಿಕಲ್ ನಾಯ್ಟ್ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಸಂಗೀತ್ ಘರ್, ಮಂಗಳೂರು ಇವರಿಂದ ಆಯೋಜಿಸಲ್ಪಡುವ ಈ ಕಾರ್ಯಕ್ರಮವು ಅಗೋಸ್ತ್ 15 ರಂದು ದೈಜಿವರ್ಲ್ಡ್ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇದಲ್ಲದೆ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಲೋಕಲ್ ವುಡ್ ಆಪ್ ಮೂಲಕ ಈ ಸಂಗೀತ ಕಾರ್ಯಕ್ರಮವನ್ನು ಸಂಪೂರ್ಣ ಉಚಿತವಾಗಿ ವೀಕ್ಷಿಸಬಹುದಾಗಿದೆ.
ಲಾಕ್ ಡೌನ್ ನಿರ್ಬಂಧಗಳು ಹಾಗೂ ಕೋವಿಡ್ ಸಮಸ್ಯೆಗಳನ್ನು ಮನಗಂಡು ಸಮಸ್ತ ವೀಕ್ಷಕರಿಗೆ ಮನೆಯಲ್ಲೇ ಕುಳಿತು ಮೆಲ್ವಿನ್ ಅವರ ಹಾಡುಗಳನ್ನು ಸವಿಯುವಂತೆ ಮಾಡುವ ಪ್ರಯತ್ನದ ಭಾಗವಾಗಿ ವರ್ಚುವಲ್ ರೀತಿಯಲ್ಲಿ 109 ನೇ ಮೆಲ್ವಿನ್ ಪೆರಿಸ್ ನಾಯ್ಟ್ ಅಯೋಜಿಸಿದ್ದೇವೆ. ಮನೆಯಲ್ಲಿದ್ದು ಕುಟುಂಬ ಸಮೇತವಾಗಿ ಯಾವುದೇ ದರ ಪಾವತಿಸದೆ ಈ ಸಂಗೀತ ರಸಮಂಜರಿ ಕಾರ್ಯಕ್ರಮನ್ನು ವೀಕ್ಷಿಸಬಹುದಾಗಿದೆ. ಮೆಲ್ವಿನ್ ಪೆರಿಸ್ ಅವರೊಂದಿಗೆ ಕೊಂಕಣಿಯ ಖ್ಯಾತ ಹಾಡುಗಾರರಾದ ಅನಿತ ಡಿ ಸೋಜಾ, ಶಿಲ್ಪ ಕುಟಿನ್ಹಾ, ಝೀನಾ ಪಿರೇರಾ, ಐವಿ ಡಿ ಸೋಜಾ, ರೋನಿ ಕ್ರಾಸ್ತ, ರೋಬಿನ್ ಸಿಕ್ವೇರಾ, ರೈನಲ್, ಈಡಿತ್ ಹಾಗೂ ಇನ್ನಿತರ ಸಂಗೀತ ಪ್ರತಿಭೆಗಳು ತಮ್ಮ ಧ್ವನಿಗೂಡಿಸಲಿದ್ದಾರೆ. ಕೊಂಕಣಿಯ ಶ್ರೇಷ್ಟ ಮಟ್ಟದ ಸಂಗೀತಗಾರರು ಈ ಸಂಗೀತ ಕಾರ್ಯಕ್ರಮಕ್ಕೆ ಸಹಕರಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಕರಾವಳಿಯ ಜನಪ್ರಿಯ ಟಿವಿ ನಿರೂಪಕರೂ, ಕಲಾವಿದರೂ ಆದ ವಾಲ್ಟರ್ ನಂದಳಿಕೆ 109ನೇ ಮೆಲ್ವಿನ್ ಪೆರಿಸ್ ನಾಯ್ಟಿನ ಕಾರ್ಯಕ್ರಮ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ.