ಸುಳ್ಯ, ಆ 12(DaijiworldNews/MS): ಮಾನಭಂಗಕ್ಕೆ ಯತ್ನಿಸಿದ ಆರೋಪದಡಿ ಯುವಕನೋರ್ವನನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಮಡಪ್ಪಾಡಿ ಸೇವಾಜೆ ಕರಂಗಿಲಡ್ಕ ಕಿರಣ್ ಬಂಧನಕ್ಕೊಳಗಾದ ಯುವಕ.
ಚೆಂಬು ಗ್ರಾಮದ ಯುವತಿ ಹಾಗೂ ಕಿರಣ್ ಪರಸ್ಪರ ಪ್ರೀತಿಸುತ್ತಿದ್ದು ಅವರೊಳಗೆ ಮನಸ್ತಾಪವಾಗಿ ಆತನಿಂದ ದೂರವಾಗಿದ್ದ ಎನ್ನಲಾಗಿದೆ. ಆದರೆ ಯುವಕ ಮತ್ತೆ ಆಕೆಯನ್ನು ಸಂಪರ್ಕಿಸಿ ಮಾತನಾಡಲು ಯತ್ನ ನಡೆಸಿದ್ದ. ಆತನಿಗೆ ಎಚ್ಚರಿಕೆ ನೀಡಿದರೂ ಆತ ಸುಮ್ಮನಿರಲಿಲ್ಲ ಎಂದು ನೊಂದು ಈತನ ವಿರುದ್ಧ ಆ.3 ರಂದು ಸುಳ್ಯ ಪೊಲೀಸ್ ಠಾಣೆಗೆ ಮಾನಭಂಗ ಯತ್ನದ ದೂರು ನೀಡಿದ್ದಾಳೆ.
ಪೊಲೀಸ್ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.