ವಿಟ್ಲ, ಆ. 11 (DaijiworldNews/SM): ಬಂಟ್ವಾಳ ತಾಲೂಕು ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಣಿಲ ಶಾಖೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ಮಾಡಿರುವ ಘಟನೆ ಬುಧವಾರದಂದು ಬೆಳಕಿಗೆ ಬಂದಿದೆ.
ಮಾಣಿಲದ ಮುರುವದಲ್ಲಿರುವ ಶಾಖೆಗೆ ನುಗ್ಗಿದ ಕಳ್ಳರು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಘಟನೆ ಬಗ್ಗೆ ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘ ಮಾಣಿಲ ಶಾಖೆ ವ್ಯವಸ್ಥಾಪಕ ಜಯರಾಮ ಅವರು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.
ಸಂಘದ ಮೇಲ್ಚಾವಣಿ ಹಂಚನ್ನು ತೆಗೆದು ಖದೀಮರು ಒಳಗಡೆ ಬಂದು ಕಚೇರಿಯ ಕಪಾಟಿನ ಬಾಗಿಲು ತೆಗೆದು ಹುಡುಕಾಡಿದ್ದಾರೆ. ಆದರೆ, ಯಾವುದೇ ಹಣ, ಬೆಲೆ ಬಾಳುವ ವಸ್ತು ಕಳವಾಗಿಲ್ಲ.
ಸೇಫ್ ಲಾಕರನಲ್ಲಿ ಇದ್ದ ಎಲ್ಲಾ ಬೆಲೆ ಬಾಳುವ ವಸ್ತುಗಳು ಹಾಗೂ ಅಡಿಕೆ, ಕಾಳುಮೆಣಸು, ಕೃಷಿ ಉಪಕರಣಗಳು ಕಳವಾಗಿಲ್ಲ ಎಂದು ತಿಳಿದುಬಂದಿದೆ.