ಉಡುಪಿ, ಅ 26 (MSP): ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಂಘವು ದೇಶಾದ್ಯಂತ ನಡೆಯುತ್ತಿರುವ ಆರೋಗ್ಯ ಇಲಾಖೆಯ ಗುತ್ತಿಗೆ ನೌಕಾರರು ಬೆಂಬಲವನ್ನು ಸೂಚಿಸಲು ಗುರುವಾರ ಅಕ್ಟೊಬರ್ 25 ರಂದು ಜಿಲ್ಲಾಡಳಿತ ಕಚೇರಿ ಎದುರು ರಜತಾದ್ರಿ ಮಣಿಪಾಲದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದರು.
ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಂಘ ಅಧ್ಯಕ್ಶ ಮಂಜುನಾಥ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, 'ಇತ್ತೀಚಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಗೊಳ್ಳುವ ಸ್ಟಾಫ್ ನರ್ಸ್ ಗಳಿಗೆ ರು 10000 ಕೊಡುತ್ತಿದ್ದು, ಅಲ್ಲದೆ ಮೇಲಧಿಕಾರಿಗಳ ಮನೆಯಲ್ಲಿ ಗುಲಾಮರಂತೆ ದುಡಿಸಿಕೊಳ್ಳುವ ಪರಿಸ್ಥಿತಿ ಕೂಡ ಇದೆ. ಇಚ್ಛಾ ಶಕ್ತಿಯ ಕೊರತೆಯಿಂದ ಈ ಆದೇಶ ತಿದ್ದುಪಡಿಯಾಗಿಲ್ಲ. ಮೂರೂ ತಿಂಗಳಿಗೊಮ್ಮೆ ನೇಮಕಾತಿ ನವೀಕರಣ ಗೊಳ್ಳುತ್ತದೆ. ಇದನ್ನು ಸ್ಟಾಫ್ ನರ್ಸ್ ಗಳು ಮಾಡಿದ ಕೆಲಸದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಕೆಲಸದಲ್ಲಿ ಅತೃಪ್ತಿ ಕಂಡಲ್ಲಿ ಹುದ್ದೆಯಿಂದ ತೆಗೆದು ಹಾಕಲಾಗುತ್ತದೆ. ಈ ವ್ಯವಸ್ಥೆಯಿಂದ ನೊಂದವರು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಮುಂದೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ರಾಜ್ಯ ಸಂಘ ತಯಾರಿ ನಡೆಸುತ್ತಿದೆ.
ಸಂಘದ ಉಪಾಧ್ಯಕ್ಷ ಸೌಮ್ಯ ಮಾತನಾಡಿ, 2009 ರಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಯವರು 24 *7 ದುಡಿಯುವ ನರ್ಸ್ ಎಂದು ಹೊಸ ಹುದ್ದೆಯನ್ನು ಸೃಷ್ಟಿಸಲಾಯಿತು. 2010 ರಲ್ಲಿ ಶುಶ್ರೂಶಕಿಯಾಗಿ ಉಪಕೇಂದ್ರದಲ್ಲಿ ತೆಗೆದುಕೊಳ್ಳ ಲಾಯಿತು. ಎರಡನೆಯ ಎಎನ್ ಎಮ್ ಎಂಬ ಹುದ್ದೆ ಇಡೀ ರಾಜ್ಯದಲ್ಲಿಯೇ ಇರಲಿಲ್ಲ. ಈ ಹುದ್ದೆ ಪದೇ ಪದೆ ಪರಿಷ್ಕರಣೆಯಾಗುತ್ತಿದ್ದಂತೆ ಸೇವಾವಧಿ ಕೂಡ ಕಡಿಮೆ ಆಗುತ್ತದೆ. ಇಲ್ಲಿ ಪ್ರಾಮಾಣಿಕ, ವಿಧೇಯರಾಗಿ ಕೆಲಸ ಮಾಡಿದರೂ ಕೂಡ ಅನುಭವಕ್ಕೆ ಬೆಲೆ ಇಲ್ಲ ಎಂದರು. ಹೊಸ ನೌಕರರ ಆದೇಶದಂತೆ ಅನುಭವಿ ನೌಕರ ಗುತ್ತಿಗೆ ಮುಗಿದ ಕೂಡಲೇ ಮತ್ತೆ ಅವರು ಹೊಸ ನೇಮಕವಾದಂತೆ ಏನೂ ಸರಕಾರಿ ಸೌಲಭ್ಯ ವಿಲ್ಲದೆ ಕೆಲಸ ಮಾಡಬೇಕಾಗುತ್ತದೆ. ಎಂಟು ತಿಂಗಳ ಗರ್ಭಿಣಿ ಆದಾಗ ಮರು ನೇಮಕಕ್ಕೆ ಅರ್ಜಿ ಹಾಕಲು ಒಪ್ಪಲಿಲ್ಲ ಯಾಕೆಂದರೆ ಹೆರಿಗೆ ಆದ ನಂತರ ಆರು ತಿಂಗಳು ಸಿಗಬೇಕಾದ ರಜೆ ಕೂಡ ಮಹಿಳಾ ಗುತ್ತಿಗೆ ನೌಕರರಿಗೆ ಸಿಗುವುದಿಲ್ಲ. ಲಾಯಲ್ಟಿ ಬೋನಸ್ ಸಿಗುವಲ್ಲಿ ನನಗೆ ಅನ್ಯಾಯ ವಾಗಿದೆ. ನಮ್ಮ ಹಕ್ಕನ್ನು ಕೇಳುವ ಹಕ್ಕು ನಮಗಿಲ್ಲ ಎಂದು ಕೇಂದ್ರ ಸರಕಾರದ ಆರೋಗ್ಯ ಇಲಾಖೆ ಜಾರಿಗೊಳಿಸಿದ ಗುತ್ತಿಗೆ ನೌಕರರ ನೀತಿಯನ್ನು ವಿರೋಧಿಸಿದರು.
ಗಿರೀಶ್ ಕಡ್ಡಿಪುಡಿ, ಖಚಾಂಚಿ, ಪ್ರೀತಂ ಮತ್ತು ಮಹಾಬಲೇಶ್, ಪ್ರಧಾನ ಕಾರ್ಯದರ್ಶಿ ಗಳು, ವಸಂತಿ, ಉಪಾಧ್ಯಕ್ಶರು ಹಾಗು ಮತ್ತಿತರರು ಉಪಸ್ಥಿತರಿದ್ದರು.