ಮಂಗಳೂರು: ಆ. 09 (DaijiworldNews/SM): 2020-2021ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ದ.ಕ. ಜಿಲ್ಲೆಯಲ್ಲಿ ಏಳು ವಿದ್ಯಾರ್ಥಿಗಳು ಪೂರ್ಣ ಅಂಕ ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಪರೀಕ್ಷೆ ಬರೆದಿರುವ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ರಾಜ್ಯಾದ್ಯಂತ ಶೇ. 99.9ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಓರ್ವ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗದ ಹಿನ್ನೆಲೆಯಲ್ಲಿ ಅನುತ್ತೀರ್ಣ ಎಂದು ಪರಿಗಣಿಸಲಾಗಿದೆ. ಇನ್ನು ರಾಜ್ಯದಲ್ಲಿ ಒಟ್ಟು 157 ವಿದ್ಯಾರ್ಥಿಗಳು 625 ಅಂಕಗಳನ್ನು ಪಡೆದುಕೊಂಡಿದ್ದಾರೆ.
ದ.ಕ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ 625 ಅಂಕ ಗಳಿಸಿದ ವಿದ್ಯಾರ್ಥಿಗಳು:
ವಿದ್ಯಾರ್ಥಿ ಹೆಸರು ತಾಲೂಕು ಶಾಲೆ
ಅನನ್ಯ ಎಂ.ಡಿ. ಸುಳ್ಯ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಶಾಲೆ
ವೆನೆಸ್ಸಾ ಶರಿನ ಡಿಸೋಜ ಸುಳ್ಯ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಶಾಲೆ
ಗಣೇಶ್ ಹನಮಂತಪ್ಪ ಮೂಡುಬಿದಿರೆ ಆಳ್ವಾಸ್ ಕನ್ನಡ ಮಾಧ್ಯಮ ಹೈಸ್ಕೂಲ್
ಕೀರ್ತನಾ ಶೆಣೈ ಮಂಗಳೂರು ಕೆನರಾ ಹೈಸ್ಕೂಲ್ ಉರ್ವ
ಸಂಯುಕ್ತ ಡಿ.ಪ್ರಭು ಬೆಳ್ತಂಗಡಿ ಸಂ. ಮೇರಿಸ್ ಆಂಗ್ಲ ಮಾಧ್ಯಮ ಶಾಲೆ
ಪ್ರತೀಕ್ ಮಲ್ಯ ಬಂಟ್ವಾಳ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಶಾಲೆ
ರಿತಿಕ ಮಂಗಳೂರು ಜೆರೊಸಾ ಬಾಲಕಿಯರ ಪ್ರೌಢ ಶಾಲೆ
ಶ್ರೀಶ ಶರ್ಮಾ ಪುತ್ತೂರು ಜೆರೊಸಾ ಆಂಗ್ಲ ಮಾಧ್ಯಮ ಶಾಲೆ ನೆಲ್ಯಾಡಿ
ತನಿಷಾ ರೈ ಪುತ್ತೂರು ಬೆಥನಿ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು