ಕಾಸರಗೋಡು, ಆ.09 (DaijiworldNews/HR): ರೈಲು ಬಡಿದು ವೃದ್ಧರೋರ್ವರು ಮೃತಪಟ್ಟ ಘಟನೆ ಮಂಜೇಶ್ವರ ಹೊಸಂಗಡಿಯಲ್ಲಿ ನಡೆದಿದ್ದು, ಎಂಜಿನ್ಗೆ ಸಿಲುಕಿದ ಮೃತದೇಹ ಕಿಲೋ ಮೀಟರ್ಗಳಷ್ಟು ರೈಲು ಸಂಚರಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಸಾಂಧರ್ಭಿಕ ಚಿತ್ರ
ಮಂಜೇಶ್ವರ ವಾಮಂಜೂರಿನ ಮೊಯಿದಿನ್ ಕುಂಞ(70) ಮೃತಪಟ್ಟವರು.
ಹೊಸಂಗಡಿ ರೈಲ್ವೆ ಗೇಟ್ ಸಮೀಪ ಹಳಿ ದಾಟುತ್ತಿದ್ದಾಗ ರೈಲು ಬಡಿದಿದ್ದು, ಎಂಜಿನ್ ಗೆ ಸಿಲುಕಿದ ಮ್ರತ ದೇಹ ವನ್ನು ಗಮನಿಸಿದ ನಾಗರಿಕರು ಅಧಿಕಾರಿಗಳಿಗೆ ನೀಡಿದ ಸೂಚನೆಯಂತೆ ಕುಂಬಳೆ ರೈಲ್ವೆ ನಿಲ್ದಾಣ ಸಮೀಪ ರೈಲನ್ನು ನಿಲುಗಡೆ ಗೊಳಿಸಲಾಯಿತು.
ಬಳಿಕ ಅಗ್ನಿಶಾಮಕ ದಳದ ಸಿಬಂದಿಗಳು ಹಾಗೂ ಪೊಲೀಸರು ಮೃತದೇಹವನ್ನು ಹೊರತೆಗೆದಿದ್ದಾರೆ.