ಶಿರ್ವ, ಅ 25 (MSP): ದುಬೈಯಲ್ಲಿ ಉದ್ಯೋಗದಲ್ಲಿದ್ದ , ಶಿರ್ವ ಪಿಲಾರ್ ಮೂಲದ ವ್ಯಕ್ತಿಯೋರ್ವರ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಅ.24 ರ ಗುರುವಾರ ಅವರು ವಾಸವಿದ್ದ ಕೊಠಡಿಯಲ್ಲಿ ಪತ್ತೆಯಾಗಿದೆ.
ಮೃತರನ್ನು ವಿನ್ಸೆಂಟ್ ಮೆಂಡೋನ್ಸಾ (54) ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ ತಮ್ಮ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಂತೆ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ
ಇವರು ದುಬೈನ ಟೆಕ್ನಿಕಲ್ ಸರ್ವಿಸ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಅನಿತಾ, ಹಾಗೂ 8 ನೇ ತರಗತಿ ಅಭ್ಯಾಸಿಸುತ್ತಿರುವ ಪುತ್ರನನ್ನು ಅಗಲಿದ್ದಾರೆ.
ದುಬೈ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.