ಉಡುಪಿ, ಆ 06 (DaijiworldNews/PY): ಉಡುಪಿ ಜಿಲ್ಲಾ ನ್ಯಾಯಾಧೀಶೆಯಾಗಿ ಮಮ್ತಾಜ್ ಅವರು ನೂತನವಾಗಿ ನೇಮಕಗೊಂಡಿದ್ದಾರೆ. ಇವರು ಉಡುಪಿ ಕಾನೂನು ಅಧಿಕಾರಿ ಕಿರಿಯ/ಎಡಿಪಿ ಆಗಿದ್ದರು.
ಫೆಬ್ರವರಿ-ಮಾರ್ಚ್ನಲ್ಲಿ ನ್ಯಾಯಾಧೀಶ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾದ 12 ಮಂದಿಯಲ್ಲಿ ಇವರು ರಾಜ್ಯದಲ್ಲೇ ಮೊದಲ ರ್ಯಾಂಕ್ಪಡೆದುಕೊಂಡಿದ್ದಾರೆ. ಅಲ್ಲದೆ, ಅವರು ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾದ ಕರ್ನಾಟಕ ರಾಜ್ಯದ ಮೊದಲ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮುಲ್ಕಿ ಮೂಲದ ಅತಿಜಮ್ಮ ಹಾಗೂ ಅಬ್ದುಲ್ ರಹಿಮಾನ್ ದಂಪತಿಯ ಪುತ್ರಿಯಾಗಿರುವ ಇವರು, ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಪುನರೂರು ಮತ್ತು ಮಂಗಳೂರು ಎಸ್ಡಿಎಂ ಕಾನೂನು ವಿದ್ಯಾಲಯದಲ್ಲಿ ಕಾನೂನು ಪದವಿ ಪೂರೈಸಿದ್ದಾರೆ. ಇವರು ಮೈಸೂರು ಮುಕ್ತ ವಿವಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
2010ರಲ್ಲಿ ಭಟ್ಕಳ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಆಯ್ಕೆಯಾದ ಇವರು ಬಳಿಕ ಉಡುಪಿ ಜೆಎಂಎಫ್ ಕೋರ್ಟ್ಗೆ ವರ್ಗಾವಣೆಗೊಂಡರು. 2018ರಲ್ಲಿ ಇವರು ಉಡುಪಿ ಜಿಲ್ಲಾ ಎಸ್ಪಿ ಕಚೇರಿಗೆ ಎಡಿಪಿಯಾಗಿ ಭಡ್ತಿ ಹೊಂದಿದರು.