ಅ 10: ಕಣ್ಣೂರಿನ ಭಾರತೀಯ ಜನತಾ ಪಾರ್ಟಿ ಕಚೇರಿ ಅವರಣದಲ್ಲಿ ಮಾರಾಕಾಸ್ತ್ರಗಳು ಅಕ್ಟೋಬರ್ 10 ರಂದು ಪತ್ತೆಯಾಗಿದೆ. ಕಣ್ಣೂರು ನಗರ ಪಾಲಿಕೆಯ ವತಿಯಿಂದ, ಕಚೇರಿಯ ಸುತ್ತಮುತ್ತ ಹಬ್ಬಿದ ಪೊದೆಗಳನ್ನು ಸ್ವಚ್ಚಗೊಳಿಸಲು ಬಂದ ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳು ಪತ್ತೆಯಾಗಿತ್ತು. ಆ ಬಳಿಕ ಪೊಲೀಸರಿಗೆ ಮಾಹಿತಿ ರವಾನಿಸಿದ್ದು ಕಾರ್ಯಚರಣೆಯ ಬಳಿಕ ತುಕ್ಕು ಹಿಡಿದ ಸ್ಥಿತಿಯಲ್ಲಿ ಎರಡು ತಲವಾರ್ , ಏಳು ಕಬ್ಬಿಣದ ರಾಡ್, ಹಾಗೂ ಚೂರಿ ದೊರಕಿದೆ . ಪತ್ತೆಯಾದ ಸ್ಥಳ ಬಿಜೆಪಿಯ ಬಾಡಿಗೆ ಕಚೇರಿ ಹಾಗೂ ಖಾಸಗಿ ಸೈಟ್ ವೊಂದರ ಮದ್ಯೆ ಇರೋ ಖಾಲಿ ಇರುವ ಸಣ್ಣ ಸ್ಥಳದಲ್ಲಿ ಪತ್ತೆಯಾಗಿದೆ ಎಂದು ಕಣ್ಣೂರು ಪೊಲೀಸ್ ಮಾದ್ಯಮಗಳಿಗೆ ತಿಳಿಸಿದ್ದಾರೆ.