ಮಂಗಳೂರು, ಆ.06(DaijiworldNews/HR): ದ.ಕ. ಟ್ರಕ್ ಮಾಲಕರ ಸಂಘ ಹಾಗೂ ಕರ್ನಾಟಕ ಲಾರಿ ಅಸೋಸಿಯೇಷನ್ ಮತ್ತು ಟ್ರಾಸ್ಫೋರ್ಟ್ ಸಂಘದಿಂದ ವತಿಯಿಂದ ಟ್ರಕ್ಗಳಲ್ಲಿ ಓವರ್ ಲೋಡ್ ಹಾಕುವುದು ನಿಲ್ಲಿಸಬೇಕು ಹಾಗೂ ಟ್ಯಾಕ್ಸ್ ಕಟ್ಡದೇ, ಎಫ್.ಸಿ. ಇನ್ಶುರೆನ್ಸ್ ಇಲ್ಲದೇ ಬರುವ ವಾಹನಗಳಿಗೆ ಎಂಟ್ರಿ ಕೊಡಬಾರದು ಎಂದು ಒತ್ತಾಯ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ದ.ಕ.ಟ್ರಕ್ ಓನರ್ ಅಸೋಸಿಯೇಷನ್ ಅಧ್ಯಕ್ಷ ಸುನಿಲ್, "ಮಂಗಳೂರು ಪೋರ್ಟ್ ನಿಂದ ಸುಮಾರು ವರ್ಷಗಳಿಂದ ಓವರ್ ಲೋಡ್ ಹಾಕಿ ಟ್ರಕ್ ಚಲಿಸುವುದು ನಡೆಯುತ್ತಿದೆ, ಎರಡು ವರ್ಷಗಳಿಂದ ಆರ್.ಟಿ.ಓ. ಹಾಗೂ ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೂ ಗಮನಕ್ಕೂ ತಂದಿದ್ದೇವೆ ಅಧಿಕೃತವಾಗಿ ಲಿಖಿತವಾಗಿ ದೂರು ಸಲ್ಲಿಸಲಾಗಿದೆ, ಆದ್ರೆ ಯಾವುದೇ ಕಾನೂನಾತ್ಮಕ ತೀರ್ಪು ದೊರೆತಿಲ್ಲ, ಇತ್ತೀಚೆಗೆ ಪುನಃ ಆರ್.ಟಿ.ಓ ಹಾಗೂ ಜಿಲ್ಲಾಧಿಕಾರಿಗೆ ದೂರು ಕೊಟ್ಟಾಗ ಸ್ಪಂದನೆಯಾಗಿ ಒವರ್ ನಿಲ್ಲಿಸುವ ಸಲುವಾಗಿ ಮಂಗಳೂರು ಪೋರ್ಟ್ ಗೆ ವಾರ್ನಿಂಗ್ ಲೆಟರ್ ಕೊಟ್ಟಿದ್ದಾರೆ, ಐದು ತಾರಿಕಿನಿಂದ ಒವರ್ ಲೋಡ್ ಮಾಡಲ್ಲ ಎಂದು ಆಶ್ವಾಸನೆ ಕೊಟ್ಟ ಬಳಿಕವೂ ಇಂದು ಆರ್.ಟಿ.ಓ. ಅಧಿಕಾರಿಗಳು ತಪಾಸಣೆ ಮಾಡುವಾಗ ಅಧಿಕ ಸಾಮರ್ಥ್ಯ ಕೋಕ್ ಲೋಡ್ ಮಾಡಿ ಬರುತ್ತಿರುವು ಕಂಡು ಬಂದಿದೆ" ಎಂದಿದ್ದಾರೆ.
ಜನರಲ್ ಸೆಕ್ರೆಟರಿ ಟ್ರಕ್ ಓನರ್ ಅಸೋಸಿಯೇಷನ್ನ ಸುಶಾಂತ್ ಶೆಟ್ಟಿ ಮಾತನಾಡಿ, ಸೆಂಟ್ರಲ್ ಗವರ್ಮೆಂಟ್ ರೂಲ್ ಪ್ರಕಾರ ಓವರ್ ಲೋಡ್ ಹಾಕುವಂತಿಲ್ಲ ಅಂತದರಲ್ಲಿ ಎನ್.ಎಮ್.ಪಿ.ಟಿ ಪೋರ್ಟ್ ಕೇಂದ್ರ ಸರಕಾರದೇ ಆಗಿದ್ದು.ಇಲ್ಲಿಯೇ ರೂಲ್ ಬ್ರೇಕ್ ಆಗುತ್ತಿದೆ. ಇಲ್ಲಿ ಒಳಗಡೆ ಯಿಂದಲೇ ಒವರ್ ಲೋಡ್ ಆಗುತ್ತಿದೆ. ಎರಡನೆಯದಾಗಿ ಟ್ರಕ್ ನ ದಾಖಲೆ ಪರಿಕ್ಷಿಸುತ್ತಿಲ್ಲ, ಅದರ ಬಗ್ಗೆ ಗಮನ ಹರಿಸಿ ಇದನ್ನು ನಿಲ್ಲಿಸಬೇಕು" ಎಂದು ಒತ್ತಾಯಿಸಿದ್ದಾರೆ.
ಇನ್ನು ಸಾರಿಗೆ ಇಲಾಖೆಯ ವಾಹನ ನಿರೀಕ್ಷಕ ಶ್ರೀದರ್ ರಾವ್ ಮಾತನಾಡಿ, "ಪರ್ನಿಟ್ ನಲ್ಲಿ ನಿಗದಿ ಪಡಿಸಿದ ಭಾರ ಸಾಮರ್ಥ್ಯ ಕೊಂಡಯ್ಯುವ ಟ್ರಕ್ ಗಳು ಹೆಚ್ಚುವರಿ ಭಾರ ಕೊಂಡುಯ್ತುವ ಟ್ರಕ್ ಗಳನ್ನು ನಿಲ್ಲಿಸಿ ಫೈನ್ ಹಾಕುವುದಾಗಲಿ ಟ್ರಕ್ ಸೀಸ್ ಮಾಡುವುದಾಗಲಿ ದಿನನಿತ್ಯ ನಮ್ಮ ಇಲಾಖೆಯಿಂದ ಮಾಡುತ್ತಿದ್ದೇವೆ, ಹಾಗೆಯೇ ದ.ಕ.ಟ್ರಕ್ ಓನರ್ ಅಸೋಸಿಯೇಷನ್ ನ ಸದಸ್ಯರ ಜೊತೆ ಗೂಡಿ ಸರಿಸುಮಾರು 25 ಟ್ರಕ್ ತಪಾಸಣೆ ನಡೆಸಿದಲ್ಲಿ ಈಗ ಎರಡು ಗಾಡಿಗಳು ಓವರ್ ಲೋಡ್ ಹಾಕಿ ಓಡಿಸಿರೋದು ಕಂಡು ಬಂದಿದೆ ಹಾಗೂ ಎರಡು ವರ್ಷದಿಂದ ಟ್ಯಾಕ್ಸ್ ಕಟ್ಟದೇ ಇರುವು ಕಂಡು ಬಂದಿದೆ" ಎಂದು ಹೇಳಿದ್ದಾರೆ.