ಮಂಗಳೂರು, ಆ 06 (DaijiworldNews/MS): ದೇಶದ ಪ್ರತಿ ಹೆಣ್ಣು ಮಗುವಿಗೆ 2,000 ರೂ. ಸಿಗುತ್ತದೆ ಎಂದು ಹೇಳಲಾಗಿರುವ ‘ಪಿಎಂ ಕನ್ಯಾ ಯೋಜನೆ’ ಹೇಳುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಇದೊಂದು ನಕಲಿ ಯೋಜನೆಯಾಗಿದ್ದು, ಭಾರತ ಸರ್ಕಾರ ಇಂಥಹ ಯಾವುದೇ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿಲ್ಲ ಎಂದು ಮಂಗಳೂರಿನ ಹಿರಿಯ ಅಂಚೆ ಅಧೀಕ್ಷಕರು ಶ್ರೀಹರ್ಷ ಸ್ಪಷ್ಟಪಡಿಸಿದ್ದಾರೆ.
"ಸಾಮಾಜಿಕ ಜಾಲತಾಣಗಳಲ್ಲಿ PM ಕನ್ಯಾ ಯೋಜನೆಯೆಂಬ ಹೆಸರಿನಲ್ಲಿ ಸಂದೇಶ ಹರಿದಾಡುತ್ತಿದ್ದು ಬಹಳಷ್ಟು ಜನ ಈ ನಿಟ್ಟಿನಲ್ಲಿ ಅಂಚೆ ಕಚೇರಿಗೆ ಬಂದು ವಿಚಾರಿಸುತ್ತಿದ್ದಾರೆ.
ಇಂತಹ ಯಾವುದೇ ಯೋಜನೆ ಕೇಂದ್ರ ಅಥವಾ ರಾಜ್ಯ ಸರ್ಕಾರ ಇದುವರೆಗೆ ಜಾರಿಗೊಳಿಸಿರುವುದಿಲ್ಲ. ಆದುದರಿಂದ ಸಾರ್ವಜನಿಕರು ಈ ಯೋಜನೆಯ ಹೆಸರಿನಲ್ಲಿ ಮೋಸ ಹೋಗದಿರಬೇಕಾಗಿ ಹಿರಿಯ ಅಂಚೆ ಅಧೀಕ್ಷಕರು ಕೋರಿಕೊಂಡಿದ್ದಾರೆ.
ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಪ್ರಾರಂಭಿಸಿರುವ ಎಲ್ಲಾ ಯೋಜನೆಗಳ ವಿವರಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ವೆಬ್ಸೈಟ್ನಲ್ಲಿ ಕಾಣಬಹುದು. ಆದರೆ, ಸಚಿವಾಲಯದ ವೆಬ್ಸೈಟ್ನಲ್ಲಿರುವ ಯಾವುದೇ ವಿಭಾಗದಲ್ಲಿಯೂ ‘ಪಿಎಂ ಕನ್ಯಾ ಯೋಜನೆ’ ಹೆಸರಿನ ಯೋಜನೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ದೇಶದ ಪ್ರತಿ ಹೆಣ್ಣು ಮಗುವಿಗೆ 2,000 ರೂ. ಸಿಗುತ್ತದೆ ಎಂದು ಹೇಳಲಾಗಿರುವ ‘ಪಿಎಂ ಕನ್ಯಾ ಆಶಿರ್ವಾದ ಯೋಜನೆ’ ಹೆಸರಿನ ನಕಲಿ ಯೋಜನೆಯ ವಿವರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.