ಮಂಗಳೂರು, ಆ 05 (DaijiworldNews/PY): ಭಾರತ ಸೇರಿದಂತೆ ಆರು ದೇಶಗಳ ಮೇಲಿ ಪ್ರಯಾಣ ನಿರ್ಬಂಧ ಸಡಿಲಗೊಳಿಸಿದ್ದು, ಕೆಲವು ಕಠಿಣ ಷರತ್ತುಗಳೊಂದಿಗೆ ಆಗಸ್ಟ್ 5ರಿಂದ ಭಾರತ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ನೈಜೀರಿಯಾ ಹಾಗೂ ಉಗಾಂಡಾದಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಮತಿ ನೀಡಿದೆ. ಆದರೆ, ಮಂಗಳೂರು ಸುತ್ತಮುತ್ತ ಸಿಲುಕಿರುವ ಯುಎಇ ನಿವಾಸಿಗಳು ಪ್ರಯಾಣಿಸಲು ಕಾಯಬೇಕಿದೆ. ಏಕೆಂದರೆ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೊರೊನಾ ಪರೀಕ್ಷಾ ಸೌಲಭ್ಯಗಳು ಇನ್ನೂ ಲಭ್ಯವಿಲ್ಲ.
ಪ್ರಾತಿನಿಧಿಕ ಚಿತ್ರ
ಯುಎಇಯಲ್ಲಿ ಕೊರೊನಾ ಲಸಿಕೆಯ ಎರಡು ಡೋಸ್ ಪಡೆದವರು, ಯುಎಇಯಲ್ಲಿ ಉದ್ಯೋಗದಲ್ಲಿರುವ ಆರೋಗ್ಯ ಕಾರ್ಯಕರ್ತರು, ವೈದ್ಯರು, ನರ್ಸ್ಗಳು ಹಾಗೂ ತಂತ್ರಜ್ಞರು ಯುಎಇಗೆ ಪ್ರಯಾಣಿಸಬಹುದು.
"ನಿರ್ಗಮನದ 48 ಗಂಟೆಗಳ ಮೊದಲು ತೆಗೆದುಕೊಂಡ ಪಿಸಿಆರ್ ಪರೀಕ್ಷೆಯ ಜೊತೆಗೆ ವಿಮಾನದಲ್ಲಿ ಪ್ರಯಾಣಿಸುವ ಮುನ್ನ ಕೊರೊನಾ ಪರೀಕ್ಷೆಗೆ ಒಳಗಾಗಬೇಕು" ಎಂದು ಏರ್ಲೈನ್ ಆಪರೇಟರ್ಗಳಿಗೆ ಹೊರಡಿಸಿದ ಸುತ್ತೋಲೆಯಲ್ಲಿ ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.
ಒಂದು ಗಂಟೆಗೆ ಗರಿಷ್ಠ ನಾಲ್ಕು ಮಾದರಿಗಳನ್ನು ಪರೀಕ್ಷಿಸಲು ಕ್ಷಿಪ್ರ ಕೊರೊನಾ ಪರೀಕ್ಷಾ ಘಟಕವನ್ನು ಬಳಸಬಹುದು. ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಲು ಕನಿಷ್ಠ 20-30 ಘಟಕಗಳು ಹಾಗೂ ನಿರ್ಗಮನಕ್ಕೆ 3-4 ಗಂಟೆಗಳು ಬೇಕಾಗುತ್ತದೆ. ಪ್ರತೀ ಘಟಕಕ್ಕೆ ಲಕ್ಷ ರೂ.ಗಳ ಅವಶ್ಯಕತೆ ಇದೆ. ಹಾಗಾಗಿ, ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಉಪಕರಣಗಳನ್ನು ಖರೀದಿ ಮಾಡಲು ಆಸಕ್ತಿ ಹೊಂದಿದ್ದಾರೆಯೇ?. ಈ ಘಟಕಗಳನ್ನು ಆರಂಭಿಸಿದ್ದಲ್ಲಿ, ವಿಮಾನ ನಿಲ್ದಾಣದಲ್ಲಿ ಈ ಸೌಲಭ್ಯಗಳನ್ನು ಕಲ್ಪಿಸಲು ಒಂದು ಅಥವಾ ಎರಡು ವಾರಗಳು ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.
ಕೇರಳ, ಬೆಂಗಳೂರು ಹಾಗೂ ಮುಂಬೈನ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಈ ಸೌಲಭ್ಯವನ್ನು ಒದಗಿಸಲಾಗಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ಹಾಗೂ ಸ್ಪೈಸ್ ಜೆಟ್ ಯುಎಇ ಗೆ ಹಾರಾಟ ನಡೆಸಲು ಉತ್ಸುಕವಾಗಿದ್ದು, ಆದರೆ, ಸೌಲಭ್ಯ ಹಾಗೂ ಬುಕ್ಕಿಂಗ್ ದಿನಾಂಕ ಇನ್ನೂ ಘೋಷಿಸಲಾಗಿಲ್ಲ.
ಟಿಕೆಟ್ ದರದ ಜೊತೆಗೆ ಪ್ರತಿ ಪರೀಕ್ಷೆಗೆ ರೂ. 2500 ರಿಂದ ರೂ. ನಿಂದ 3,000ರೂ. ವರೆಗೆ ವೆಚ್ಚವಾಗಬಹುದು ಎಂದು ಮೂಲಗಳು ತಿಳಿಸಿವೆ.