ಉಡುಪಿ, ಅ 10 : ಶಿವರಾಮ ಕಾರಂತ ಟ್ರಸ್ಟ್ ಹಾಗೂ ಕೋಟತಟ್ಟು ಗ್ರಾಮಪಂಚಾಯತ್ ನೀಡುವ "ಡಾ. ಕಾರಂತ ಹುಟ್ಟೂರ ಪ್ರಶಸ್ತಿ" ಯನ್ನು ಪ್ರಕಾಶ್ ರೈ ಅವರಿಗೆ ಪ್ರದಾನ ಮಾಡುವುದನ್ನು ವಿರೋಧಿಸಿ ಸಂಘ ಪರಿವಾರ ಹಾಗೂ ಇತರ ಸಂಘಟನೆಗಳು ಮಂಗಳವಾರ ಮದ್ಯಾಹ್ನ ಪ್ರತಿಭಟನೆಗೆ ಯತ್ನಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭದ ಸ್ಥಳವಾದ ಡಾ. ಕಾರಂತ ಥೀಮ್ ಪಾರ್ಕ್ ಬಳಿ ಬಳಿ ಉಡುಪಿ ನಾಥ ಪಂಥ, ಬಜರಂಗ ದಳ , ಜೈ ಭಾರ್ಗವ ಸಂಘಟನೆ, ಮುಂತಾದ ಸಂಘತನೆ ಕಪ್ಪು ಬಾವುಟದ ಮೂಲಕ ಪ್ರತಿಭಟನೆಗೆ ಮುಂದಾದಾಗ ಎಚ್ಚೆತ್ತ ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದರು. ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ವಿಶೇಷ ಕಟ್ಟೆಚ್ಚರ ವಹಿಸಿದ್ದಾರೆ.
ಪ್ರಕಾಶ್ ರೈ ಹೇಳಿದ್ದ ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಬಂಧನ ವಿಳಂಬದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಹೇಳಿಕೆ, ಮತ್ತು ಉತ್ತರ ಪ್ರದೇಶದ ಸಿಎಂ ಯೋಗಿನಾಥ ವಿರುದ್ದ ನೀಡಿದ್ದ ಹೇಳಿಕೆಗಳು ವಿವಾದಕ್ಕೆ ಕಾರಣವಾದ ಹಿನ್ನಲೆಯಲ್ಲಿ ಈ ಎಲ್ಲಾ ಸಂಘಟನೆಗಳು ರೈಗೆ ಪ್ರಶಸ್ತಿ ಪ್ರದಾನ ಬೇಡ ವಿರೋಧ ವ್ಯಕ್ತಪಡಿಸಿದ್ದರು.