ಮಂಗಳೂರು,ಅ 24 (MSP): ನಗರದ ಸೆಂಟ್ರಲ್ ಮಾರುಕಟ್ಟೆ ರಸ್ತೆಯಲ್ಲಿರುವ ಮಳಿಗೆಯೊಂದರಲ್ಲಿ ಅ.23 ರ ತಡ ರಾತ್ರಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಅತಂಕದ ಸ್ಥಿತಿ ನಿರ್ಮಾಣವಾಗಿತ್ತು.ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಬೆಂಕಿ ಹತೋಟಿಗೆ ತರುವಲ್ಲಿ ಸಫಲರಾಗಿದ್ದಾರೆ.
ಕಟ್ಟಡದಲ್ಲಿರುವ ಸೆಸ್ಮಾ ಮೆಡಿಕಲ್ಸ್ ಎಂಬ ಔಷಧಿ ಅಂಗಡಿಯಲ್ಲಿ ಮೊದಲಿಗೆ ಅಗ್ನಿ ಅವಘಡ ನಡೆದಿದ್ದು, ಬಳಿಕ ಬೆಂಕಿ ಪಕ್ಕದಲ್ಲಿರುವ ಇತರ ಅಂಗಡಿಗಳಿಗೆ ಹರಡಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದೆ ಎಂದು ಹೇಳಲಾಗಿದ್ದು, ಘಟನೆಯ ಪರಿಣಾಮ ಮೆಡಿಕಲ್ ಶಾಪ್ ನಲ್ಲಿದ್ದ ಲಕ್ಷಾಂತರ ಮೌಲ್ಯದ ಔಷಧಿ , ಪೀಠೋಪಕರಣ ಹಾಗೂ ಹನುಮಾನ್ ಎಲೆಕ್ಟ್ರಿಕಲ್ಸ್ ನಲ್ಲಿರುವ ಉಪಕರಣಗಳು ಬೆಂಕಿಗೆ ಅಹುತಿಯಾಗಿದೆ. ಅಂದಾಜು 15 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಶಂಕಿಸಲಾಗಿದೆ.