ಮಂಗಳೂರು, ಅ 10 : ಸಾಮಾಜಿಕ ಹೋರಾಟಗಾರ ಜೆರಾಲ್ಡ್ ಟವರ್ಸ್ ಅವರ ನೇತೃತ್ವದಲ್ಲಿ ನಗರಪಾಲಿಕೆ ನಾಗರಿಕರ ಬಳಗವೂ, ಮಂಗಳವಾರ , ಪಾರ್ಥೀವ ಶರೀರದ ಅಣಕು ಪ್ರದರ್ಶನ ರೀತಿಯಲ್ಲಿ ಕದ್ರಿಯಲ್ಲಿ ವಿನೂತನ ಪ್ರತಿಭಟನೆ ನಡೆಸಿತು. ಕೆಲವು ತಿಂಗಳುಗಳ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಕದ್ರಿ ಕೆಎಫ್'ಸಿ ಹಾಗೂ ವೈನ್ ಎಂಡ್ ಸ್ಪಿರಿಟ್ ಎದುರುಗಡೆ ಯಾವುದೋ ಕಾಮಗಾರಿಗಾಗಿ ರಸ್ತೆಯನ್ನು ಅಗೆದಿದ್ದು, ಕಾಮಗಾರಿಯ ಬಳಿಕ ಮೊದಲು ಹಾಕಿದ್ದ ಇಂಟರ್ ಲಾಕ್ ಗಳನ್ನು ಮೊದಲಿನಂತೆ ಜೋಡಿಸದೆ, ರಸ್ತೆ ಬದಿಯಲ್ಲೆ ಅಸಮರ್ಪಕವಾಗಿ ಜೋಡಿಸಿಟ್ಟಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಪಾಲಿಕೆಗೆ ಈ ಬಗ್ಗೆ ಹಲವಾರು ಬಾರಿ ದೂರು ನೀಡಿದ್ದರೂ ಪಾಲಿಕೆ ನಿರ್ಲಕ್ಷ್ಯ ತೋರುತ್ತಿದ್ದು ಇದನ್ನು ಎಚ್ಚರಿಸುವ ಸಲುವಾಗಿ ಈ ಅಣಕು ಪ್ರದರ್ಶನ ಮಾಡಿತು.