ಕಾಸರಗೋಡು, ಅ 23(SM): ಎಂಡೋಸಲ್ಫಾನ್ ಸಂತ್ರಸ್ಥರ 50 ಸಾವಿರ ರೂಪಾಯಿ ತನಕದ ಸಾಲ ಮನ್ನಾ ಮಾಡಲು ಕೇರಳ ಸರಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಸರಕಾರ 2.17 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ.
ಸಾಂದರ್ಭಿಕ ಚಿತ್ರ
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಈ ಅನುದಾನ ಮಂಜೂರುಗೊಳಿಸಲಾಗಿದೆ. ಎಂಡೋಸಲ್ಫಾನ್ ಸಂತ್ರಸ್ತರ ಸಮಗ್ರ ಪ್ಯಾಕೇಜ್ ನಡಿ ಅನುದಾನವನ್ನು ಸರಕಾರ ಒದಗಿಸಿದೆ. ಸಂತ್ರಸ್ತರ ಮೂರು ಲಕ್ಷ ರೂಪಾಯಿ ತನಕದ ಸಾಲ ಮನ್ನಾ ಮಾಡಲು ಈ ಹಿಂದೆ ಅಧಿಕಾರದಲ್ಲಿದ್ದ ಸರಕಾರ ತೀರ್ಮಾನಿಸಿತ್ತು. ಈ ಹಿನ್ನಲೆಯಲ್ಲಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು.
ಜಿಲ್ಲಾಧಿಕಾರಿಯವರು ಸಲ್ಲಿಸಿದ ವರದಿಯಂತೆ 2011ರ ಜೂನ್ ತನಕದ 1,083 ಮಂದಿ ಸಂತ್ರಸ್ತರ 2,17,038.655 ರೂಪಾಯಿಗಳನ್ನು ಮನ್ನಾ ಮಾಡಲು ಹಣವನ್ನು ಸರಕಾರ ಮುಂಜೂರುಗೊಳಿಸಿದೆ. ಬಾಕಿ ಉಳಿದ ಸಾಲವನ್ನು ಹಂತ ಹಂತವಾಗಿ ಮನ್ನಾ ಮಾಡಲು ಸರಕಾರ ನಿರ್ಧರಿಸಿದೆ.