Karavali
‘ದಾಯ್ಜಿ ವರ್ಲ್ಡ್ ವೀಕ್ಲಿ’ ಯಿಂದ ‘ಸ್ವಾಭಿಮಾನ್ ಪ್ರಶಸ್ತಿ'ಗಳ ಘೋಷಣೆ-ಏಳು ವಿಶೇಷ ಸಾಧಕರಿಗೆ ಸನ್ಮಾನ
- Tue, Oct 10 2017 02:56:34 PM
-
ಮಂಗಳೂರು,ಅ 10 : ಮಂಗಳೂರಿನಿಂದ ಪ್ರಕಟವಾಗುವ ಕರ್ನಾಟಕದ ಏಕೈಕ ಆಂಗ್ಲ ಸಾಪ್ತಾಹಿಕ, ‘ದಾಯ್ಜಿ ವರ್ಲ್ಡ್ ವೀಕ್ಲಿ’, ತನ್ನ ಎಂಟನೇ ವರುಷದ ಸಂಭ್ರಮದಲ್ಲಿ, ಸಮಾಜದ ಭಿನ್ನ ಸಾಮರ್ಥ್ಯವುಳ್ಳ ಆರು ವಿಶಿಷ್ಟ ಪ್ರತಿಭೆಯ ವ್ಯಕ್ತಿಗಳನ್ನೂ, ಹಾಗೇಯೆ ಅವರ ಸೇವೆಯಲ್ಲಿ ತೊಡಗಿಸಿಕೊಂಡಂತಹ ಒಂದು ವಿಶೇಷ ಶಾಲೆಯನ್ನು ಗುರುತಿಸಿ ಅವರನ್ನು ‘ಸ್ವಾಭಿಮಾನ್ ಪ್ರಶಸ್ತಿ ೨೦೧೭’ ಕೊಡುವ ಮೂಲಕ ಸನ್ಮಾನಿಸಲು ನಿರ್ಧರಿಸಿದೆ. ಈ ಪ್ರಶಸ್ತಿಗಳನ್ನು ಶನಿವಾರ, ಅಕ್ಟೋಬರ್ ೧೪ ರಂದು ಸಾಯಂಕಾಲ ೪.೦೦ ಗಂಟೆಗೆ ಮಂಗಳೂರಿನ ಪುರಸಭೆಯಲ್ಲಿ ಯೋಜಿಸಲಾದ ಕಾರ್ಯಕ್ರಮದಲ್ಲಿ ಕೊಡಲಾಗುವುದು. ವಿಶೇಷ ಶಾಲೆಗೆ ಕೊಡುವಂತಹ ಸನ್ಮಾನವು ದೇಶದ ಪ್ರತಿಷ್ಟಿತ ‘ಕರ್ನಾಟಕ ಭ್ಯಾಂಕ್’ ತನ್ನ ಸಾಮಾಜಿಕ ಕಳಕಳಿಯ ಪ್ರತಿಯಾಗಿ ರೂ. ೫೦,೦೦೦ ನಗದು, ಸಕಲ ಸನ್ಮಾನ, ಪ್ರಶಸ್ತಿ ಹಾಗೂ ಸ್ಮರಣಿಕೆಯ ಮುಖಾಂತರ ಕೊಡಲಾಗುವುದು. ಹಾಗೇಯೇ ಆರು ವಿಶೇಷ ಸಾಧಕರಿಗೆ ಸನ್ಮಾನದ ಜೊತೆಗೆ ಸ್ಮರಣಿಕೆ ಪತ್ರ, ಪ್ರಶಸ್ತಿ, ಹಾಗೂ ನಗದು ರೂ ೨೫,೦೦೦ ವನ್ನು ನೀಡಲಾಗುವುದು.
ಕಾರ್ಯಕ್ರಮದಲ್ಲಿ ಮಂಗಳೂರಿನ ಪಾಧರ್ ಮುಲ್ಲರ್ ಚಾರಿಟೇಬಲ್ ಇನ್ ಸ್ಟಿಟ್ಯೂಶನ್ಸ್ ನಿರ್ದೇಶಕರಾದ ಮಹಾಪೂಜ್ಯ ರಿಚಾರ್ಡ್ ಕುವೆಲೊರವರು ಪ್ರಧಾನ ಅತಿಥಿಯಾಗಿದ್ದು, ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೆಶಕರಾದ ಶ್ರೀ ಮಹಾಬಲೇಶ್ವರ ಎಮ್. ಎಸ್. ದುಬಾಯಿಯ ಪ್ರತಿಸ್ಟಿತ ತುಂಬೆ ಗ್ರೂಪ್ ಹಾಗೂ ಗಲ್ಪ್ ಮೆಡಿಕಲ್ ಯುನಿವರ್ಸಿಟಿಯ ಅಧ್ಯಕ್ಶರಾದ ಶ್ರೀ ತುಂಬೆ ಮೊಹಿದ್ದೀನ್, ‘ಮಾಲಯ್ಕಾ’ ಕಂಪೆನಿಯ ಅಧ್ಯಕ್ಶರಾದ ಗಿಲ್ಬರ್ಟ್ ಬ್ಯಾಪ್ತಿಸ್ಟ್, ಫಿಝಾ ಗೂಫ್ ಆಪ್ ಕಂಪೆನಿಸ್‘ ಆಡಳಿತ ನಿರ್ದೇಶಕ, ಶ್ರೀ ಬಿ. ಎಮ್. ಫಾರುಖ್ , ಹಾಗೂ ಮುಂಬಯಿಯ ಭಂಡಾರಿ ಮಹಾಮಂಡಳ್ ಅಧ್ಯಕ್ಶ ಕೆ. ಸುರೇಶ್ ಭಂಡಾರಿ ಅವರು ಗೌರವ ಅಥಿತಿಗಳಾಗಿ ಆಗಮಿಸಲಿದ್ದಾರೆ. ಮಣಿಪಾಲ್ ಯುನಿವರ್ಸಿಟಿಯ ನಿವ್ರತ್ತ ಉಪ ಕುಲಪತಿ, ಪದ್ಮ ಭೂಷಣ ಡಾ. ಬಿ. ಎಮ್. ಹೆಗ್ಡೆಯವರು ದಿಕ್ಸೂಚಿ ಭಾಷಣವನ್ನು ನೀಡಲಿದ್ದಾರೆ ಹಾಗೇಯೆ ಅವರ ಗೌರವ ಸಂಪಾದಕತ್ವದಲ್ಲಿ ಪ್ರಕಟಗೊಳ್ಳುವ ’ದಾಯ್ಜಿವರ್ಲ್ಡ್ ವೀಕ್ಲಿ ವಿಶೇಷಾಂಕವನ್ನು ಬಿಡುಗಡೆಗೊಳಿಸಲಾಗುವುದು.
ಪ್ರತೀ ಮೂರು ವರುಷಗಳಿಗೊಮ್ಮೆ, ಸ್ವಾಭಿಮಾನ ಪ್ರಶಸ್ತಿಯನ್ನು ದಾಯ್ಜಿವರ್ಲ್ಡ್ ವೀಕ್ಲಿ ಸಂಪಾದಕೀಯ ಮಂಡಳಿ ತಮಗೆ ತಲುಪಿದ ಅರ್ಜಿಯ ಪೈಕಿ ೧೫ ಹೆಸರುಗಳನ್ನು ಆಯ್ಕೆ ಮಾಡಿ, ‘ಆಯ್ಕೆ ಸಮಿತಿಯ ಮುಂದೆ ಪ್ರಸ್ತುತ ಪಡಿಸುತ್ತಿದ್ದು, ಆಯ್ಕೆ ಸಮಿತಿಯಲ್ಲಿದ್ದ ಶ್ರೀ ಬಸ್ತಿ ವಾಮನ ಶೆಣೈ (ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಶರು), ಡೆಕ್ಕನ್ ಹೆರಾಲ್ಡ್ ಇಂಗ್ಲೀಷ್ ಪತ್ರಿಕೆಯ ಮಂಗಳೂರಿನ ಮುಖ್ಯಸ್ಥ, ಡೊ. ರೊನಾಲ್ಡ್ ಅನಿಲ್ ಪೆರ್ನಾಂಡಿಸ್, ಬ್ಯಾರಿ ಸಮೂಹ ಸಂಸ್ಥೆಯ ಮೌತರ್ಮ ಕೈರುನ್ನೀಸಾ ಸೈಯದ್, ‘ಆವೆ ಮರಿಯಾ ಪಾಲೆಟಿವ್ ಕೇರ್’ ಇದರ ಮುಖ್ಯಸ್ತೆ ಡೊ. ಲವಿನಾ ನೊರೊನ್ಹಾ, ಹಾಗೂ ಅನುಪಮಾ ಕನ್ನಡ ಪತ್ರಿಕೆಯ ಸಂಪಾದಕರಾದ ಶೆಹನಾಜ್ ಎಮ್. ಆಯ್ಕೆ ಸಮಿತಿಯ ಮುಖ್ಯ ಸಂಚಾಲಕರಾದ ವಿಲಿಯಮ್ ಪಾಯ್ಸ್ ಅವರ ಮುಂದಾಳತ್ವದಲ್ಲಿ ಈ ಕೆಳಗೆ ಕಾಣಿಸಿದ ಮಹಾಶಯರಿಗೆ ಪ್ರಶಸ್ತಿಯನ್ನು ನೀಡಲು ಶಿಫಾರಸು ಮಾಡಿರುತ್ತಾರೆ.ಸಾಧಕರ ಬಗ್ಗೆ ಸಂಕ್ಷೀಪ್ತ ವಿವರ -
೧. ಶ್ರೀಮತಿ ತಬಸ್ಸಮ್ ಸಾರಥ್ಯದ ‘ಸ್ನೇಹದೀಪ ಸಂಸ್ಥೆ, ಕೋಟ್ಟಾರ ಕ್ರಾಸ್
ಎಚ್.ಐ. ವಿ. ಅಥವಾ ಏಡ್ಸ್ ಶಬ್ದ ಕೇಳಿದೊಡನೆ ಸಾಮಾನ್ಯವಾಗಿ ಜನಸಾಮಾನ್ಯರಲ್ಲಿ ಒಂದು ಬಗೆಯ ಭಯ, ಬೀತಿ ಅಥವಾ ತಾತ್ಸಾರವನ್ನು ನಾವು ಕಾಣುತ್ತೆವೆ. ಆದರಲ್ಲೂ ತಮ್ಮ ಹೆತ್ತವರಿಂದ ಎಚ್. ಐ. ವಿ. ಸೋಂಕಿಗೆ ಬಲಿಯಾದ ಮಕ್ಕಳನ್ನು ಸಾಕಿ, ಅವರ ಶುಶ್ರೂಶೆ ಮಾಡಿ ಅವರನ್ನು ಸಾಮಾನ್ಯ ಮಕ್ಕಳ ಸ್ಥಿತಿಗೆ ತರವಂತಹ ಒಂದು ಪ್ರಯತ್ನ ನಡೆಯುತ್ತದೆಯಾದರೆ ಅದು ಕೊಟ್ಟಾರಿನ ಅಡ್ದರಸ್ತೆಯಲ್ಲಿರುವ (ಬಿಜೈ ಕಾಪಿಕಾಡ್) ‘ಸ್ನೇಹಧೀಪ್’ ಎಂಬ ದೀನ ದಲಿತರ ಮನೆಯಲ್ಲಿ, ತಬಸ್ಸಮ್ ಎಂಬ ಮುಸ್ಲಿಮ ಮಹಿಳೆಯ ಶ್ರದ್ಧೆ, ತ್ಯಾಗ ಹಾಗೂ ಪರಿಶ್ರಮದ ಫಲವಾಗಿ.ತಬಸ್ಸಮ್ ಒಬ್ಬಳು ಸಾಹಸಿ ಹಾಗೂ ಕರುಣಾಮಯಿ ಮಹಿಳೆ. ತನ್ನ ಕುಟುಂಬದ ಹಲವಾರು ಕಷ್ಟ ಕಾರ್ಪಣ್ಯಗಳ ಮಧ್ಯೆಯೂ ಅವಳು ತನ್ನ ಸರ್ವ ಶಕ್ತಿಯನ್ನು ಈ ಮಕ್ಕಳಿಗಾಗಿ ಮುಡಿಪಿಟ್ಟಿರುತ್ತಾಳೆ. ಸಾಮಾಜಿಕವಾಗಿ ಉಪೇಕ್ಷ್ಗೆಗೆ ಒಳಗಾದ ಈ ಮಕ್ಕಳ ಪುನರ್ವಸತಿಗಾಗಿ, ಅವರ ಶಿಕ್ಶಣಕ್ಕಾಗಿ ಹೆಣಗಾಡುವ ಈ ಮಹಿಳೆಯ ಪ್ರಯತ್ನವನ್ನು ಮೆಚ್ಚಿ, ದಾಯ್ಜಿವರ್ಲ್ಡ್ ಸಂಸ್ಥೆ ಅವರನ್ನು ‘ಸ್ವಾಭಿಮಾನ್’ ಪ್ರಶಸ್ತಿಯ ಮೂಲಕ ಸನ್ಮಾನ ನೀಡಲು ಇಚ್ಚಿಸುತ್ತದೆ. ತಬಸ್ಸಮ್ ಹಾಗೂ ಅವರ ಸಹೋದ್ಯೋಗಿಗಳ ಸಾಹಸಕ್ಕೆ ಮೆಚ್ಚಿ ಅವರಿಗೆ ಗೌರವ ಸಲ್ಲಿಸುವ ಮೂಲಕ, ಅವರಿಗೆ ಆರ್ಥಿಕವಾಗಿ ಸಹಾಯ ನೀಡಿ ಹುರಿದುಂಬಿಸಬೇಕಾಗಿ ಸಮಾಜದ ಗಣ್ಯರಲ್ಲಿ ಕೇಳಿಕೊಳ್ಳುತ್ತೇವೆ
.
೨. ಸಿಲೆಸ್ತಿನ್ ಮೇಬಲ್ ರೊಡ್ರಿಗಸ್, ವಿಟ್ಲ
೩೪ ವರ್ಶ ಪ್ರಾಯದ ಮಹಿಳೆ, ಸಿಲೆಸ್ತಿನ್ ವಿಟ್ಲದ ವಾಸಿ. ಅವಳು ತನ್ನ ಎರಡು ಕೈಗಳಲ್ಲಿ ಮತ್ತು ಎರಡು ಕಾಲುಗಳಲ್ಲಿ ಕೇವಲ ಒಂದೊಂದೇ ಬೆರಳು ಹೊಂದಿದ್ದು, ೮೦% ಶಾರೀರಿಕ ದೌರ್ಬಲ್ಯಕ್ಕೆ ಈಡಾಗಿದ್ದಾರೆ. ಇದರ ಹೊರತಾಗಿ ತನ್ನ ಸ್ವ-ಸಾಮರ್ಥ್ಯದಿಂದ ಹಾಗೇನೆ ಸ್ವ-ಅಭಿಮಾನದಿಂದ ಯಾರ ಮುಂದೆಯೂ ಕೈ ಚಾಚದೆ ಅಥವಾ ಜೀವನದ ಭಿಕ್ಶೆ ಬೇಡದೆ, ತನ್ನ ಮನೆಯಿಂದ ಎಂಟರಿಂದ ಹತ್ತು ಕಿ. ಮೀ. ಬಸ್ ಪ್ರಯಾಣ ಮಾಡಿ, ಕಳೆದ ೧೮ ವರ್ಷ ಗಳಿಂದ ವಿಟ್ಲದಲ್ಲಿನ ಮೆಸ್ಕಾಂ ಕಚೇರಿಯಲ್ಲಿ ಗುಮಾಸ್ತೆಯಾಗಿ ದುಡಿಯುತ್ತಿದ್ದಾಳೆ. ಇಸ್ಟು ವರ್ಶ ದುಡಿದೂ ಈ ಸಂಸ್ಥೆ ತನ್ನನ್ನು ಈ ವರೆಗೆ ಕಾಯಂ ನೌಕರಿಯನ್ನು ನೀಡಿಲ್ಲ ಎಂಬ ವೇದನೆ ಅವರನ್ನು ಕಾಡುತ್ತಿದೆ ಯಾದ್ರೂ ತನ್ನ ದೈಹಿಹ ನೂನ್ಯತೆ ತನ್ನ ಸ್ವಂತ ಕೆಲಸ ಅಡೆತಡೆಯಾಗುತ್ತಿಲ್ಲ ಎಂಬ ತೃಪ್ತಿ ಅವರಿಗಿದೆ.
ದಾಯ್ಜಿವರ್ಲ್ಡ್ ಅವರಲ್ಲಿರುವ ಅಸಾಮಾನ್ಯ ಸಾಮರ್ಥ್ಯವನ್ನು ಗುರುತಿಸುತ್ತದೆ ಹಾಗೇಗೆ ಪ್ರವಾಹದ ಸುಳಿಗೆ ಸಿಕ್ಕದೆ, ಪ್ರವಾಹದ ವಿರುದ್ಧ ಈಜಾಡುವ ಅವರ ಪ್ರವ್ರತ್ತಿಯನ್ನು ತುಂಬು ಹೃದಯದಿಂದ ಶ್ಲಾಘಿಸುತ್ತದೆ.
೩. ಪ್ರಮೀಳಾ ಜೋಯ್ಸ್ ಪಿಂಟೊ, ವಾಮಂಜೂರು
೨೮ ಪ್ರಾಯದ ಪ್ರಮೀಳಾ ಜೋಯ್ಸ್ ಶಾರಿರಿಕವಾಗಿ ಸುಧೃಡವಾಗಿದ್ದರೂ ಮಂದಮತಿಯವರು, ಹೀಗಾಗಿ ಕಲಿಕೆಯಲ್ಲಿ ನಿಧಾನಗತಿಯವರು. ಅವರು ಉಡುಪಿ ಜಿಲ್ಲೆಯಲ್ಲಿನ ಪಾಂಬುರ್ ಎಂಬಲ್ಲಿರುವ ‘ಮಾನಸ ಪುನರ್ವಸತಿ ಹಾಗೂ ಪ್ರಶಿಕ್ಷಣ ಕೇಂದ್ರದಲ್ಲಿ ವೃತ್ತಿ ಶಿಕ್ಷಣ ಹಾಗೂ ತರಬೇತಿ ಪಡೆದಿದ್ದು, ಕೆಲವು ಕುಶಲ ಕಾರ್ಮಿಕ ಕೆಲಸಗಳಲ್ಲಿ ನಿಪುಣತೆ ಪಡೆದಿದ್ದಾರೆ.
ಮಂಗಳೂರಿನ ಸೈಂಟ್ ಅಗ್ನೆಸ್ ಸ್ಪೆಷಲ್ ಸ್ಕೂಲ್ ಇದರಲ್ಲಿ ಕೆಲ ವರುಶಗಳ ಪ್ರಶಿಕ್ಷಣ ಪಡೆದಿದ್ದು, ಹಲವು ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿರುತ್ತಾರೆ. ವಿಶೇಷವಾಗಿ ರೋಲರ್ ಸ್ಕೇಟಿಂಗ್ ಹಾಗೂ ನೇರ ಓಟ ಸ್ಪರ್ಧೆಯಲ್ಲಿ ಹಲವು ಪದಕಗಳನ್ನು ಗೆದ್ದಿರುತ್ತಾರೆ.
೨೦೧೧ ರಲ್ಲಿ, ಗ್ರೀಸ್’ನ ಎಥೆನ್ಸ್ ನಲ್ಲಿ ಜರಗಿದ ‘ವಿಶೇಷ ಒಲಿಂಪಿಕ್ಸ್ ಜಾಗತಿಕ ಬೇಸಗೆ ಕಾಲದ ಆಟೋಟ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ಒಂದು ಚಿನ್ನ ಹಾಗೂ ಒಂದು ಕಂಚಿನ ಪದಕವನ್ನು ಗೆಲ್ಲುವ ಮೂಲಕ ಕೇವಲ ತನ್ನ ದೇಶಕ್ಕೆ ಮಾತ್ರವಲ್ಲ ತನ್ನ ರಾಜ್ಯಕ್ಕೆ,ಕರಾವಳಿ ಕರ್ನಾಟಕಕ್ಕೆ ಹಾಗೂ ತನ್ನ ಕುಟುಂಬ, ಶಾಲೆ, ಇನ್ನಿತರರಿಗೆ ಹೆಮ್ಮೆಯನ್ನು ತಂದಿರುತ್ತಾರೆ.
ದಾಯ್ಜಿವರ್ಲ್ಡ್ ಪ್ರಮೀಳಾ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ಇಂತಹ ಸಾಧನೆಗಳನ್ನು ಇನ್ನು ಮುಂದೆಯು ಮುಂದುವರಿಸಲಿ ಎಂದು ಹುರಿದುಂಭಿಸುತ್ತದೆ.
೪. ಶ್ರೀ ಕೃಷ್ಣ ಭಟ್, ಕಾವೂರು
ಮಂಗಳೂರು ನಗರದ ಕಾವುರಿನಲ್ಲಿ ವಾಸ್ತವ್ಯವಿರುವ ೬೨ ಪ್ರಾಯದ ಶ್ರೀ ಕೃಷ್ಣಭಟ್ ರವರು ಜನ್ಮತ: ಪೋಲಿಯೋ ಪೀಡಿತರಾಗಿದ್ದರೂ ಹಿಸಕದೆ, ಹಿಂಜರಿಯದೆ ತನ್ನ ವಿಧ್ಯಾಭ್ಯಾಸವನ್ನು ಉತ್ತಮ ಅಂಕಗಳೊಂದಿಗೆ ಪೂರೈಸಿದರು ಮಾತ್ರವಲ್ಲದೆ, ಬ್ಯಾಂಕ್ ಆಫ್ ಇಂಡಿಯಾದಲ್ಲಿ ೩೦ ವರುಶಗಳ ಕಾಲ ಸೇವೆ ಸಲ್ಲಿಸಿರುತ್ತಾರೆ.
೨೦೧೪ ರಲ್ಲಿ ತನ್ನ ವೃತ್ತಿಯಿಂದ ನಿವೃತ್ತ ಹೊಂದಿದರೂ, ಹಲವಾರು ಸಾಮಾಜಿಕ ಕೆಲಸಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಪರರಿಗಾಗಿ ದುಡಿಯುತ್ತಿದ್ದಾರೆ. ಸ್ವತ: ಶಾರೀರಿಕ ನ್ಯೂನತೆಯಿಂದ ಬಳಗಿದ್ದರೂ, ತನ್ನ ಇಬ್ಬರು ಗಂಡು ಮಕ್ಕಳಿಗೆ ಅತ್ತ್ಯುತ್ತಮ ಪೋಶಣೆ ಕೊಡುವ ಮೂಲಕ ಅವರನ್ನು ಸ್ವತ್ರಪ್ತಿಯ ವಿದ್ಯಾಬ್ಯಾಸಾವನ್ನು ಸಹಾ ಕೊಡಮಾಡಿದ್ದಾರೆ.
ಹಾಗಾಗಿ ಅವರ ಹಿರಿಯ ಮಗ ಅಮೇರಿಕಾದಲ್ಲಿ ವೈಧ್ಯಕೀಯ ವ್ರತ್ತಿಯಲ್ಲಿ ತೊಡಗಿದ್ದು, ಕಿರಿಯ ಮಗ ಎಮ್. ಟೆಕ್ ಪದವಿದಾರನಾಗಿದ್ದು ತಾಂತ್ರಿಕ ಶಿಕ್ಷಣ ಕೊಡುವ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿ ಸೇವೆ ನೀಡುತ್ತಿದ್ದಾರೆ.
ಶ್ರೀ ಕೃಷ್ಣ ಭಟ್ಟರ್ ಈ ಅಪಾರ ಸಾಧನೆಯನ್ನು ಮೆಚ್ಚಿ ದಾಯ್ಜಿವರ್ಲ್ಡ್ ಸಂಸ್ಥೆಯು ಅವರನ್ನು ಅಭಿನಂದಿಸುತ್ತಿದೆ.
೫. ಅರ್ಜುನ್ ಅಡ್ಯಂತಾಯ, ಕೊಡಿಯಾಲ್ ಬೈಲ್ ಗುತ್ತ್ತು
ಮಂಗಳೂರಿನ ಕೊಡಿಯಾಲ್ ಬೈಲ್ ಗುತ್ತಿನಲ್ಲಿ ತನ್ನ ತಂದೆ ತಾಯಿ ಹಾಗೂ ೯೨ ವರುಶದ ಅಜ್ಜನೊಂದಿಗೆ ವಾಸಿಸುವ ಅರ್ಜುನ್ ಅಡ್ಯಂತಾಯ ಹುಟ್ಟಿದ ಕೆಲವೇ ತಿಂಗಳಿನಲ್ಲಿ ಬಹು ಅಪರೂಪದ ‘osteogenesis imperfecta ಎಂಬ ಕಾಯಿಲೆಗೆ ಒಳಗಾಗಿ ತನ್ನ ಕೈ ಕಾಲುಗಳ ದೌರ್ಬಲ್ಯಕ್ಕೆ ಒಳಗಾದರು. ಈಗ ಅವರಿಗೆ ೧೯ ಪ್ರಾಯವಾದರೂ ್ ಬೇರೆಯವರ ಸಹಾಯ ವಿಲ್ಲದೆ ಅವರು ಎದ್ದು, ಆಚೀಚೆ ಚಲಿಸುವಂತಿಲ್ಲ.
ಹಾಗಾಗ್ಯೂ, ತನ್ನ ವಿಧ್ಯಾಭ್ಯಾಸವನ್ನು ಮಾಡುತ್ತಾರೆ ಮಾತ್ರವಲ್ಲ, ಎಸ್.ಎಸ್.ಎಲ್.ಸಿ. ಪರೀಕ್ಶೆಯಲ್ಲಿ ೮೨% ಅಂಕಗಳನ್ನೂ, ಮೊದಲ ವರ್ಷದ ಪಿ. ಯು. ಸಿ. ಪರೀಕ್ಶೆಯಲ್ಲಿ ೭೦% ಅಂಕಗಳನ್ನು ಗಳಿಸಿ, ಈಗ ಪಿ.ಯು.ಸಿ ಯ ಎರಡನೇ ವರ್ಷದಲ್ಲಿ ಕಲಿಯುತ್ತಿದ್ದಾರೆ.
ಈಗತಾನೆ ‘ದಾಯ್ಜಿವರ್ಲ್ಡ್’ ಓದುಗರ ಕೃಪೆಯಿಂದ ವೀಲ್ ಚೇರ್ ಕೊಂಡುಕೊಳ್ಳುವ ಮೂಲಕ ಸ್ವಪ್ರಯತ್ನದಿಂದ ಚಲಿಸುವಂತವರಾಗಿದ್ದಾರೆ. ಸೈಂಟ್ ಅಲೋಶಿಯಸ್ ಕಾಲೇಜಿನ ಶಿಕ್ಷಕ ವೃಂದ ಹಾಗೂ ತನ್ನ ಸ್ನೇಹಿತರ ಒತ್ತಾಸೆ ಹಾಗೂ ಸಹಕಾರದ ಮೇರೆಗೆ ಪದವಿ ಶಿಕ್ಷಣ ವನ್ನು ಗಳಿಸಿ, ಸರಕಾರಿ ಕೆಲಸ ಗಿಟ್ಟಿಸಿಕೊಳ್ಳುವ ಆಸೆ ಮತ್ತು ವಿಶ್ವಾಸ ಅವರಿಗಿದೆ.
ಯಾವಾತ್ತೂ ಮಂದಹಾಸಿಯಾಗಿರುವ ಅರ್ಜುನ್ ತನ್ನ ಶಾರೀರಿಕ ನ್ಯೂನತೆಯಿಂದ ತನಗೆ ಯಾವಾತ್ತೂ ಹಾನಿಯಾಗಿಲ್ಲ ಎಂದು ಭಾವಿಸುತಾರೆ. ಅವರ ಅಪ್ರತಿಮ ಸಾಹಸ, ದೈರ್ಯಗಳನ್ನು ‘ದಾಯ್ಜಿವಲ್ಡ್’ ಗಮನಿಸಿದ್ದು, ಅವರಿಗೆ ತನ್ನ ಜೀವನದಲ್ಲಿ ಏಳ್ಗೆ, ಯಶಸ್ಸು ದೊರಕಲಿ ಎಂದು ಹಾರೈಸುತ್ತದೆ.
೬. ಆಶ್ಲಿ ಡಿಸೋಜಾ, ಉಲ್ಲಾಳ
ಮಂಗಳೂರು ನಗರಪ್ರದೇಶದ ಉಲ್ಲಾಳದಲ್ಲಿ ವಾಸಿಸಿರುವ ೧೮ ವರ್ಷ ಪ್ರಾಯದ ಆಶ್ಲಿ ಡಿಸೋಜಾ, ಜನ್ಮಶ ಮಂದಮತಿಯಿಂದ ತನ್ನ ಪ್ರಾಯದ ಇತರ ಮಕ್ಕಳಿಗಿಂತ ಬುದ್ದಿ ಸೂಕ್ಸ್ಮತೆಯಲ್ಲಿ ಬರೆಯುವ ಅಥವಾ ಓದುವ ಶಕ್ತಿಯಾಲ್ಲಿ ಕೊರತೆಯನ್ನು ಹೊಂದಿದ್ದಾರೆ.
ಅದಾಗ್ಯೂ, ಅವರು ತನ್ನ ವಿಧ್ಯಾಭ್ಯಾಸವನ್ನು ಚೊಕ್ಕವಾಗಿ ಮಾಡಿಕೊಂಡು ಬಂದಿದ್ದು, ಎಸ್. ಎಸ್. ಎಲ್. ಸಿ ಪರೀಕ್ಶೆಯಲ್ಲಿ ತೇರ್ಗಡೆಗೊಂಡದ್ದು ಮಾತ್ರವಲ್ಲ ಸದ್ಯಕ್ಕೆ ಮಂಗಳೂರಿನ ಸೈಂಟ್ ಅಗ್ನೆಸ್ ಸ್ಪೆಶಲ್ ಸ್ಕೂಲ್ ನಲ್ಲಿ ಪಿ. ಯು.ಸಿ. ಯ ಎರಡನೇ ವರ್ಷದಲ್ಲಿ ಕಲಿಯುತ್ತಿದ್ದಾರೆ.
ಚಿಕ್ಕ ವಯಸ್ಸಿನಿಂದಲೇ ಆಟೋಟಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಆಶ್ಲಿ ಹಲವಾರು ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಅದರಲ್ಲೂ ಮೈಸೂರಿನಲ್ಲಿ ಜರಗಿದ ೧೭ ನೇ ರಾಶ್ಟ್ರಮಟ್ಟದ ಸ್ಕೌಟ್ ಎಂಡ್ ಗೇಮ್ಸ್ ಕ್ರೀಡಾಕೂಟ ‘ಜಂಬೂರಿ’ಯಲ್ಲಿ ಭಾಗವಹಿಸಿದ್ದಾರೆ ಹಾಗೂ ಚಿನ್ನದ ಪದಕವನ್ನು ಗೆದ್ದಿರುತ್ತಾರೆ. ಡೆಡ್ ಹಾಗೂ ಬೆಂಚ್ ಪ್ರೆಸ್ ಎಂಬ ಬಾರ ಹೊತ್ತುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಂಡ್ಯ, ಕೊಲ್ಹಾಪುರ, ಹುಬ್ಬಳ್ಳೀ ಮತ್ತು ಇನ್ನಿತರಕಡೆ ನಡೆದ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿ ಚಿನ್ನದ ಪದಕಗಳನ್ನು ಗೆಲ್ಲಿರುತ್ತಾರೆ. ಇತ್ತೀಚೆಗೆ ೨೦೧೭ ಜೂನ್ ನಲ್ಲಿ ಜರಗಿದ್ದ ರಾಸ್ಟ್ರೀಯ ಮಟ್ಟದ ವಿಶೇಶ ಓಲಂಪಿಕ್ಸ್ ಕ್ರೀಡೆಯಲ್ಲಿ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಸ್ವರ್ಣ ಪದಕವನ್ನು ಗೆದ್ದಿದ್ದಾರೆ.
ದಾಯ್ಜಿವರ್ಲ್ಡ್ ಆಶ್ಲಿಯವರನ್ನು ಅವರ ಅಪಾರ ಸಾಧನೆ ಪ್ರತೀ ಹುರಿದುಂಬಿಸುತ್ತದೆ ಹಾಗೂ ಅವರನ್ನು ‘ಸ್ವಾಭಿಮಾನ್’ ಪ್ರಶಸ್ತಿಯ ಮೂಲಕ ಸನ್ಮಾನಿಸಲು ಗೌರವ ಪಡುತ್ತಿದೆ.
೭.ಪ್ರಜ್ವಲ್ ಲೋಬೋ, ಉರ್ವಾ
೨೧ ವರ್ಷ ಪ್ರಾಯದ ಮಂದಮತಿಯ ವಿಧ್ಯಾರ್ಥಿಗಳ ಅಭಿವ್ರದ್ದಿಗಾಗಿ ಮೀಸಲಾಗಿರುವ ಶಕ್ತಿನಗರದ ‘ಸಾನಿಧ್ಯ ರೆಸಿಡೆನ್ಸಿಯಲ ಸ್ಕೂಲ್ ನಲ್ಲಿ ಕಲಿಯುತ್ತಿರುವ ಉರ್ವಾ ವಾಸಿಯಾಗಿರುವ ಪ್ರಜ್ವಲ್ ಶೇಕಡಾ ೫೦ ಮಂದಮತಿಯ ಸೌಮ್ಯ ಮಾನಸಿಕ ನ್ಯೂನತೆಯಿಂದ ಬಳಲುತ್ತಿದ್ದಾರೆ. ಅದರ ಹೊರತಾಗಿಯೂ ಅವರು ತನ್ನ ವಿಧ್ಯಾಭ್ಯಾಸ ಅಥವಾ ಆಟೋಟಗಳಲ್ಲಿ ಅಪಾರ ಸಾಧನೆ ಗಳಿಸಿದ್ದಾರೆ ಮಾತ್ರವಲ್ಲ ತನ್ನ ಪ್ರಾಯದ ಇತರ ಸಭಲ ಯುವಕರಿಗಿಂತ ತಾನು ಹಿಂದಿಲ್ಲ ಎಂದು ತೋರಿಸಿಕೊಟ್ಟಿರುತ್ತಾರೆ.
ಸ್ವಾಭವಿಕವಾಗಿಯೆ, ಒಳ್ಳೆಯ ಕ್ರೀಡಾಪಟು ವಾಗಿದ್ದು, ಮುಂಬಯಿಯಲ್ಲಿ ನಡೆದ ಹ್ಯಾಂಡ್ ಬಾಲ್ ಸ್ಪ್ರರ್ಧೆಯಲ್ಲಿ ಬೆಳ್ಳೀ ಪದಕವನ್ನು ತನ್ನದಾಗಿಸಿ ಕೊಂಡಿರುತ್ತಾರೆ. ಹಾಗೇಯೆ ಓಡಿಸ್ಸಾದಲ್ಲಿ ಜರಗಿದ ಸಾಪ್ಟ್ ಬಾಲ್ ಸ್ಪರ್ಧೆಯಲ್ಲಿ ಬೆಳ್ಳೀ ಪದಕ ಗೆದ್ದಿರುತಾರೆ. ೨೦೧೭, ಜೂನ ನಲ್ಲಿ ಮಹರಾಶ್ಟ್ರದಲ್ಲಿ ಜರಗಿದ ರಾಶ್ಟ್ರೀಯ ಮಟ್ಟದ ಕ್ರಿಡಾಕೂಟದಲ್ಲಿ ಭಾಗವಹಿಸಿ, ಪವರ್ ಲಿಫ್ಟಿಂಗ್ ನಲ್ಲಿ ಬೆಳ್ಳೀ ಮತ್ತು ಚಿನ್ನದ ಪದಕಗಳನ್ನು ಗಿಟ್ಟಿಸಿಕೊಂಡಿರುತ್ತಾರೆ.
ತನ್ನ ಅದ್ಭುತ ಸಾಧನೆಗಳ ಮೂಲಕ, ಪ್ರಜ್ವಲ್ ತನ್ನ ತಂದೆ ತಾಯಿ, ಸಂಭಂದಿಗಳು, ಮಿತ್ರರನ್ನು ಮಾತ್ರವಲ್ಲ ತನ್ನ ಶಾಲೆ ‘ಸಾನಿಧ್ಯ’ಕ್ಕು ಕೀರ್ತಿಯನ್ನು ಕೊಡಮಾಡಿದ್ದಾರೆ. ದಾಯ್ಜಿವರ್ಲ್ಡ್ ಪ್ರಜ್ವಲ್’ಗೆ ಉತ್ತಮ ಭವಿಶ್ಯ ಹಾಗೂ ಇನ್ನೂ ಹೆಚ್ಚಿನ ಶ್ರೇಯಸ್ಸನ್ನು ಕೋರುತ್ತಿದೆ.ಈ ಬಗ್ಗೆ ಮಾಹಿತಿ ನೀಡಿದ ಪತ್ರಿಕಾ ಗೋಷ್ಟಿಯಲ್ಲಿ ದಾಯ್ಜಿವರ್ಲ್ಡ್ ವೀಕ್ಲಿಯ ಪ್ರಧಾನ ಸಂಪಾದಕ ಶ್ರೀ ಹೇಮಾಚಾರ್ಯಾ, ಪ್ರಶಸ್ತಿ ಆಯ್ಕೆ ಸಮಿತಿಯ ಮುಖ್ಯ ಸಂಚಾಲಕರಾದ ವಿಲಿಯಮ್ ಪಾಯ್ಸ್, ಶ್ರೀ ಬಸ್ತಿ ವಾಮನ ಶೆಣೈ (ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರು), ಮಂಗಳೂರಿನ ಪ್ರೆಸ್ ಕ್ಲಬ್ ಅಧ್ಯಕ್ಶ ಹಾಗೂ ಡೆಕ್ಕನ್ ಹೆರಾಲ್ಡ್ ಇಂಗ್ಲಿಷ್ ಪತ್ರಿಕೆಯ ಸಂಪಾದಕ ಡೊ. ರೊನಾಲ್ಡ್ ಅನಿಲ್ ಪೆರ್ನಾಂಡಿಸ್, ಬ್ಯಾರಿ ಸಮೂಹ ಸಂಸ್ಥೆಯ ಮೌತರ್ಮ ಕೈರುನ್ನೀಸಾ ಸೈಯದ್, ‘ಆವೆ ಮರಿಯಾ ಪಾಲೆಟಿವ್ ಕೇರ್’ ಇದರ ಮುಖ್ಯೆಸ್ತೆ ಡೊ. ಲವಿನಾ ನೊರೊನ್ಹಾ, ಹಾಗೂ ಅನುಪಮಾ ಕನ್ನಡ ಪತ್ರಿಕೆಯ ಸಂಪಾದಕರಾದ ಶೆಹನಾಜ್ ಎಮ್. ಮುಂತಾದವರು ಉಪಸ್ಥಿತರಿದ್ದರು.