ನವದೆಹಲಿ,ಅ.23 (MSP): ಮೀ- ಟೂ ಅಭಿಯಾನದಿಂದ ಒಂದೆಡೆ ಸೆಲೆಬ್ರಿಟಿಗಳ ಮುಖವಾಡಗಳು ಬಯಲಾಗುತ್ತಿದ್ದರೆ, ಇದರ ಕಿಡಿಗೆ ಬಾಲಿವುಡ್, ಚಂದನವನ ತತ್ತರಿಸಿದೆ. ಇವೆಲ್ಲದರ ಮದ್ಯೆ ಹೆಣ್ಣುಮಕ್ಕಳು, ಮಹಿಳೆಯರ ಮೇಲಷ್ಟೇ ಶೋಷಣೆಯಲ್ಲದೆ ಪುರುಷರ ಮೇಲೂ ದೌರ್ಜನ್ಯ, ದಬ್ಬಾಳಿಕೆಗಳು ನಡೆಯುತ್ತದೆ ಅನ್ನುವ ಮಾತುಗಳು ಕೇಳಿಬರುತ್ತಿದೆ. ಶೋಷಣೆಗೆ ಲಿಂಗಬೇಧವಿಲ್ಲ ಎಂಬ ಕೂಗು ಕೇಳಿಸಲಾರಂಭಿಸಿದೆ. ಈ ಹಿನ್ನಲೆಯಲ್ಲಿ ಇದೀಗ ಮೆನ್-ಟೂ ಎನ್ನುವ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ.
ಮೆನ್ಟೂ ಅಭಿಯಾನ ಬೆನ್ನಲ್ಲೇ ಮೊದಲ ಮೆನ್- ಟೂ ಅರೋಪವೂ ಕೇಳಿಬಂದಿದೆ. ಹಿಂದಿ ಧಾರವಾಹಿಯ ನಟ ರಾಹುಲ್ ಸಿಂಗ್ ಅವರು ಬಾಲಿವುಡ್ ನ ಬರಹಗಾರ ಮತ್ತು ನಿರ್ಮಾಪಕರಾದ ಮುಸ್ತಾಕ್ ಶೇಕ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಈ ಹಿಂದೆ ಬಾಲಿಕವಧು ದಾರವಾಹಿಯ ನಟಿ ಪ್ರತ್ಯೂಷಾ ಬ್ಯಾನರ್ಜಿ ಅವರು ಮೃತಪಟ್ಟಾಗ ನಟಿಯ ಗೆಳೆಯನಾದ ರಾಹುಲ್ ರಾಜ್ ಸಿಂಗ್ ಸುದ್ದಿಯಾಗಿದ್ದರು. ಇದೀಗ ನಟ ರಾಹುಲ್, ಬರಹಗಾರ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ನನ್ನ ವೃತ್ತಿ ಜೀವನವನ್ನು ಹಾಳುಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಒಂದು ದಿನ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗಿ ವಿಚಿತ್ರವಾಗಿ ಮಾತನಾಡಿ ಮುಂದಿನ ಬಾರಿ ಸಿದ್ದನಾಗಿರು ಎಂದಿದ್ದರು. ಇದರಿಂದ ನಾನು ತುಂಬಾ ಭಯಬೀತನಾಗಿದ್ದೆ. ಕೆಲ ಸಮಯದ ಬಳಿಕ ನನಗೆ ಮುಸ್ತಾಕ್ ಪೋನ್ ಕಾಲ್ ಮಾಡಿ ಒಂದು ಪಾತ್ರಕ್ಕಾಗಿ ನಿನ್ನನ್ನು ಆಯ್ಕೆ ಮಾಡಿದ್ದೇನೆ ಎಂದು ಹೇಳಿದರು. ಆದರೆ ಬಳಿಕ ನನ್ನಲ್ಲಿರುವ ಕೆಲಸವನ್ನು ಉಳಿಸಿಕೊಳ್ಳಬೇಕಾದರೆ ನೀನು ನನ್ನ ಜೊತೆ ಲೈಂಗಿಕ ಸಂಬಂಧ ಬೆಳೆಸಬೇಕು ಎಂದು ಹೇಳಿದಾಗ ನಾನು ನಿರಾಕರಿಸಿದೆ. ನಾನು ಆ ರೀತಿ ಹೇಳಿದ ತಕ್ಷಣ ಕಾರ್ಯಕ್ರಮದಿಂದ ನನ್ನನ್ನು ವಜಾ ಮಾಡಲಾಯಿತು ಎಂದು ಸಿಂಗ್ ಆರೋಪಿಸಿದ್ದಾರೆ. ಈ ವಿಚಾರವೆಲ್ಲಾ ನನ್ನ ತಂದೆ ತಾಯಿಗೆ ೧೦ ವರ್ಷಗಳ ಹಿಂದೆಯೇ ತಿಳಿದಿದ್ದು, ನಾನು ಕಿರುತೆರೆಯನ್ನು ತೊರೆದಿದ್ದು ಯಾಕೆ ಎನ್ನುವುದು ತನ್ನ ಮಿತ್ರರಿಗೆ ಮತ್ತು ಅಭಿಮಾನಿಗಳಿಗೆ ತಿಳಿಯಲು ಈ ವಿಚಾರ ಬಹಿರಂಗಪಡಿಸಿದ್ದೇನೆ ಎಂದಿದ್ದಾರೆ