ಮುಡುಬಿದಿರೆ, ಅ 22(SM): ಮುಡುಬಿದಿರೆಯ ಕಡಂದಲೆ ನಲ್ಲೆಗುತ್ತು ಸಮೀಪದ ಶಾಂಭವಿ ನದಿ ತೀರದ ಪೊದೆಯೊಂದರಲ್ಲಿ ಅಕ್ಟೋಬರ್ ೨೧ರಂದು ಪತ್ತೆಯಾಗಿದ್ದ ಶವದ ರುಂಡವನ್ನ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ನದಿ ನೀರಿನ ಆಳದಿಂದ ಹೊರ ತೆಗೆದಿದ್ದಾರೆ.
ಕಳೆದ 10 ದಿನಗಳ ಹಿಂದೆ ನಾಪತ್ತೆಯಾಗಿದ್ದ ಸಚ್ಚೇರಿಪೇಟೆ ಕೊರಗರ ಕಾಲನಿ ನಿವಾಸಿ ತನಿಯ ಅವರ ಶವವು ರುಂಡವಿಲ್ಲದೇ ಕೊಳೆತ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿತ್ತು. ಸೋಮವಾರದಂದು ಮತ್ತೆ ಪೋಲೀಸರು ಮೂಡುಬಿದಿರೆ ಅಗ್ನಿಶಾಮಕ ದಳದವರ ನೆರವಿನಿಂದ ಸ್ಥಳದಲ್ಲಿ ಕೂಲಂಕುಷ ಹುಡುಕಾಟ ನಡೆಸಿದಾಗ ಅಲ್ಲೇ ಶವ ಪತ್ತೆಯಾಗಿದ್ದ ಪೊದೆಯ ಸ್ವಲ್ಪ ಪಕ್ಕದ ನೀರಿನ ಮೇಲ್ಗಡೆ ಶೇಖರಣೆಗೊಂಡಿದ್ದ ಕಸದ ರಾಶಿಯಲ್ಲಿ ರುಂಡ ಪತ್ತೆಯಾಗಿದೆ.
ಬಹಿರ್ದೆಸೆಗೆಂದು ತೋಟದ ಮಧ್ಯೆ ಹೋಗಿದ್ದ ತನಿಯ ಕಾಲು ಜಾರಿ ಬಿದ್ದು ಮೃತಪಟ್ಟಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.