ನವದೆಹಲಿ ಅ 22 (MSP): ಒಂದು ವಾರ ಕಾಲ ದುಬೈ ಸರ್ಕಾರದ ಯಾವುದೇ ಗ್ರಾಹಕ ಸೇವಾ ಕೇಂದ್ರಗಳು ಸೇವೆ ನೀಡುವುದಿಲ್ಲ ಎಂದು ಘೋಷಿಸಿದೆ. ಕಾರಣ ದುಬೈ ತನ್ನ ದೇಶದ ಜನರನ್ನು ಆನ್-ಲೈನ್ ಕಡೆಗೆ ಸೆಳೆಯಲು ಈ ವಿಭಿನ್ನ ತಂತ್ರ ನಡೆಸುತ್ತಿದೆ. ಹೀಗಾಗಿ ಸರ್ಕಾರವು ಸಾರ್ವಜನಿಕರಿಗೆ ಯಾವುದೇ ಗ್ರಾಹಕ ಸಂಬಂಧಿತ ಸೇವೆಗಳನ್ನು ವಾರದ ಮಟ್ಟಿಗೆ ನೀಡುವುದಿಲ್ಲ ಎಂದು ಹೇಳಿದೆ.
ದುಬೈ ಸರ್ಕಾರ ಇನ್ನು ನಾಲ್ಕೈದು ವರ್ಷದಲ್ಲಿ ಎಲ್ಲಾ ಸರ್ಕಾರಿ ಸೇವೆಗಳನ್ನು ಸಂಪೂರ್ಣವಾಗಿ ಆನ್-ಲೈನ್ ವ್ಯವಸ್ಥೆಗೆ ಮಾರ್ಪಾಡು ಮಾಡಿಕೊಳ್ಳಲಿದೆ. ಅದಕ್ಕೆ ಮುಂಚಿತವಾಗಿಯೇ ಜನರನ್ನು ಆನ್-ಲೈನ್ ವ್ಯವಸ್ಥೆಯ ಕಡೆ ಸೆಳೆಯಲು, ಸರ್ಕಾರಕ್ಕೆ ಸಲ್ಲಬೇಕಾದ ಫೀಸುಗಳನ್ನು ತಮ್ಮ ಆಪ್ ಹಾಗೂ ವೆಬ್ ಸೈಟುಗಳ ಮೂಲಕವೇ ಪಾವತಿಸಲು ಹಾಗೂ ಸೇವೆಗಳನ್ನು ಪಡೆಯಲು ಈ ಕ್ರಮಕೈಗೊಂಡಿದೆ. ಇದಕ್ಕಾಗಿ ದುಬೈ ಸರ್ಕಾರ ’ಗ್ರಾಹಕ ಸೇವಾ ಕೇಂದ್ರಗಳಿಲ್ಲದ ಒಂದು ವಾರ ( A week without service centers) ’ ಎನ್ನುವ ಕ್ಯಾಂಪೇನ್ ನಡೆಸುತ್ತಿದೆ.
ಯಾವುದೇ ಸರಕಾರಿ ಸೇವಾ ಕೇಂದ್ರಗಳು ತೆರೆಯದೆ ಇದ್ದಾಗ ಜನರೆಲ್ಲರೂ ಅನಿವಾರ್ಯವಾಗಿ ಮೊಬೈಲ್ ಮತ್ತು ವೆಬ್ ತಾಣಗಳ ಮೊರೆ ಹೋಗಬೇಕಾಗುತ್ತದೆ ಇದಕ್ಕಾಗಿ ಈ ರೀತಿಯ ಅಭಿಯಾನವನ್ನು ದುಬೈ ಸರ್ಕಾರ ಮಾಡುತ್ತಿದೆ.