ಜೈಪುರ, ಅ 22(MSP) : ಸಾಮೂಹಿಕ ಅತ್ಯಾಚಾರ ಎಸಗಿದ ಬಳಿಕವೂ ಚಿತ್ರಹಿಂಸೆ ನೀಡಲು ಪ್ರಾರಂಭಿಸಿದ ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ನೇಪಾಳ ಮೂಲದ 23 ರ ಹರೆಯದ ಯುವತಿಯೊಬ್ಬಳು ವಸತಿ ಸಮುಚ್ಚಯದ ಮೂರನೇ ಮಹಡಿಯಿಂದ ನಗ್ನವಾಗಿ ಕೆಳಕ್ಕೆ ಹಾರಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಸಂತ್ರಸ್ತ ಯುವತಿ ನೀಡಿದ ದೂರಿನ ಮೇರೆಗೆ ಲೋಕೇಶ್ ಸೈನಿ (19) ಮತ್ತು ಕಮಲ್ ಸೈನಿ (24) ಎಂಬ ಇಬ್ಬರನ್ನು ಬಂಧಿಸಲಾಗಿದೆ. ಶನಿವಾರ ರಾತ್ರಿಯೇ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ದಕ್ಷಿಣ ಜೈಪುರ ಎಸಿಪಿ ಕೆ.ಕೆ ಅವಸ್ತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಯುವತಿಯನ್ನು ಮುಹಾನ ಏರಿಯಾದ ಅಪಾರ್ಟ್ ಮೆಂಟ್ ನಲ್ಲಿ ಕೂಡಿ ಹಾಕಿ ಅ.19 ರ ಶುಕ್ರವಾರ ರಾತ್ರಿ ಮತ್ತು ಶನಿವಾರ ಅತ್ಯಾಚಾರ ಎಸೆಗಿದ್ದಾರೆ, ಕಾಮುಕರಿಂದ ತಪ್ಪಿಸಿಕೊಂಡು ಯುವತಿ ವಿವಸ್ತ್ರಳಾಗಿಯೇ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಹೊರಬಂದಿದ್ದಾಳೆ. ಜೈಪುರದಿಂದ 18 ಕಿಲೋಮೀಟರ್ ದೂರದ ಮುಹಾನಾ ಎಂಬಲ್ಲಿ ಈ ಘಟನೆ ನಡೆದಿದೆ. ಜೈಪುರಿಯಾ ಆಸ್ಪತ್ರೆಯಲ್ಲಿ ಯುವತಿಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ತನಿಖೆ ಮುಂದುವರಿದಿದೆ.