ಚೆನ್ನೈ,ಅ 21 (MSP):ಶಬರಿಮಲೆ ದೇಗುಲ ಪ್ರವೇಶ ವಿವಾದಕ್ಕೆ ಸಂಬಂಧಪಟ್ಟಂತೆ, ಶಬರಿಮಲೆ ಕ್ಷೇತ್ರದ ಭಕ್ತರಾದಂತಹ ಹಾಗೂ ದಕ್ಷಿಣ ಭಾರತ ಸೂಪರ್ ಸ್ಟಾರ್ ರಜನಿಕಾಂತ್ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ದೇಗುಲಗಳು ಆಯಾಯ ಸಂಪ್ರದಾಯವನ್ನು ಹೊಂದಿರುತ್ತದೆ. ಈ ಸಂಪ್ರದಾಯಗಳು ಪುರಾತನ ಕಾಲದಿಂದಲೂ ಜಾರಿಯಲ್ಲಿರುತ್ತದೆ ಹೀಗಾಗಿ ದೇವಸ್ಥಾನಗಳು ಪಾಲಿಸಿಕೊಂಡು ಬಂದಿರುವ ಸಂಪ್ರದಾಯ, ಆಚಾರ ವಿಚಾರಗಳಲ್ಲಿ ಯಾರೂ ಮಧ್ಯಪ್ರವೇಶ ಮಾಡಬಾರದು. ಆ ಸಂಪ್ರದಾಯಗಳಿಗೆ ನಾವು ಗೌರವ ನೀಡಬೇಕು ಎಂದು ರಜನಿಕಾಂತ್ ವಿನಂತಿಸಿಕೊಂಡಿದ್ದಾರೆ.
ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲೂ, ಎಲ್ಲಾ ಸ್ಥಳಗಳಲ್ಲೂ ಸಮಾನವಾಗಿ ಕಾಣಬೇಕು ಎಂದ ಅವರು ಸುಪ್ರೀಂ ತೀರ್ಪನ್ನು ಕೂಡಾ ಗೌರವಿಸಲೇಬೇಕು ಎಂದಿದ್ದಾರೆ. ಇದಲ್ಲದೆ ದೇಗುಲದ ಆಚರಣೆ ಮತ್ತು ಸಂಪ್ರದಾಯಗಳನ್ನು ಕೂಡಾ ಗೌರವಿಸಬೇಕು ಎಂದಿರುವ ಅವರು ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ.
ಇನ್ನು ದಕ್ಷಿಣ ಭಾರತ ಇನ್ನೊಬ್ಬ ಸ್ಟಾರ್ ನಟ ಕಮಲ್ಹಾಸನ್ ಅವರು ಶಬರಿಮಲೆ ದೇಗುಲ ಪ್ರವೇಶ ವಿವಾದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಮಹಿಳೆಯರಿಗೆ ಸಮಾನ ಅವಕಾಶ ಸಿಗಬೇಕು ಎಂದು ಕೇಳುವವರಲ್ಲಿ ನಾನೂ ಮೊದಲಿಗ. ಆದರೆ, ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಅಯ್ಯಪ್ಪ ಸ್ವಾಮಿ ಭಕ್ತರು ಏಕೆ ಪ್ರತಿಭಟನೆ ಮಾಡುತ್ತಿದ್ದಾರೋ ತಿಳಿದಿಲ್ಲ. ಹೀಗಾಗಿ ಈ ಬಗ್ಗೆ ನನ್ನ ಬಳಿ ಯಾವುದೇ ಪ್ರತಿಕ್ರಿಯೆ ನೀಡಬೇಡಿ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.