ಕನ್ನಡ ಅಂದ್ರೆ ಮೂಗು ಮೂರಿಯೋರು ಈ ಸುದ್ದಿ ಸ್ವಲ್ಪ ಓದಿ.. ಆಸ್ಟ್ರೇಲಿಯಾದ ಮೆಲ್ಬೋರ್ನ್ ಸರ್ಕಾರಿ ಶಾಲೆಗಳು ಮಕ್ಕಳಿಗೆ ಕನ್ನಡ ಕಲಿಸುವ ತೀರ್ಮಾನಕ್ಕೆ ಬಂದಿವೆ. ಸುದ್ದಿ ಕೇಳಿ ನಿಜವಾಗಲು ಆಶ್ಚರ್ಯ ಆಗಬಹುದು, ಅದರೆ ನಿಜ ಕರ್ನಾಟಕದಲ್ಲೇ ಕನ್ನಡ ಬೇಕೇ ಬೇಡವೇ ಎನ್ನುವ ಚರ್ಚೆ ಆಗ್ತಾ ಇರೋವಾಗ, 12ನೇ ತರಗತಿ ವಿದ್ಯಾರ್ಥಿಗಳು ತಮ್ಮ ಬೋರ್ಡ್ ಎಕ್ಸಾಂನಲ್ಲಿ ಕನ್ನಡವನ್ನು ದ್ವಿತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು ಎಂಬ ಅವಕಾಶವನ್ನು ಆಸ್ಟ್ರೇಲಿಯಾ ಸರ್ಕಾರ ಕೊಟ್ಟಿದೆ.
ನವೆಂಬರ್ ಹತ್ರ ಬರ್ತಾ ಇದ್ದಾ ಹಾಗೇ ಕನ್ನಡ ಪ್ರೇಮಿಗಳು ಈ ಸುದ್ದಿ ಕೇಳಿ ನಿಜಕ್ಕೂ ಖುಷಿಯಾಗಬಹುದು.ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಅನೇಕ ಕನ್ನಡಿಗರು ಇದ್ದಾರೆ. ಆ ಕನ್ನಡಿಗರಿಗಾಗಿ ಆಸ್ಟ್ರೇಲಿಯಾ ಸರ್ಕಾರ ಇಂಥದೊಂದ್ದು ನಿರ್ಧಾರಕ್ಕೆ ಬಂದಿದೆ. ಮುಂದಿನ ವರ್ಷದಿಂದಲೇ, ವಿಕ್ಟೋರಿಯಾ ಸರ್ಕಾರವು ಮೆಲ್ಬೋರ್ನ್ನ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡ ಕಲಿಸಲಿದೆ ಎಂದು ಸ್ಪಷ್ಟಪಡಿಸಿದೆ. ಈ ಮಹತ್ವದ ನಿರ್ಧಾರವನ್ನು ವಿಕ್ಟೋರಿಯಾ ಸ್ಕೂಲ್ ಆಫ್ ಲಾಂಗ್ವೇಜ್ಸ್ (Victoria School of Languages – VSL) ಮೂಲಕ ಜಾರಿಗೊಳಿಸಲಾಗುತ್ತಿದೆ.ವಿಕ್ಟೋರಿಯಾ ಸ್ಕೂಲ್ ಆಫ್ ಲಾಂಗ್ವೇಜ್ಸ್ಗೆ ಮೆಲ್ಬೋರ್ನಿನ ಕನ್ನಡಿಗರ ಸಂಘಟನೆಯು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡವನ್ನು ಐಚ್ಛಿಕ ಭಾಷಾ ವಿಷಯವನ್ನಾಗಿ ಕಲಿಸಬೇಕೆಂದು ಮನವಿ ಮಾಡಿತ್ತು.
ಮೆಲ್ಬೋರ್ನಿನ ಕನ್ನಡಿಗರ ಸಂಘಟನೆಯ ಮನವಿಯನ್ನು ಬಹಳ ಗಂಭೀರವಾಗಿ ಪರಿಗಣಿಸಿದ ವಿಕ್ಟೋರಿಯಾ ಸ್ಕೂಲ್ ಆಫ್ ಲಾಂಗ್ವೇಜ್ಸ್ ಆ ಮನವಿಯನ್ನು ಪುರಸ್ಕರಿಸಿ ವಿಕ್ಟೋರಿಯಾ ಸರ್ಕಾರ ಮಕ್ಕಳಿಗೆ ಕನ್ನಡ ಕಲಿಸುವ ನಿರ್ಧಾರ ಮಾಡಿದೆ. ಒಟ್ಟಿನಲ್ಲಿ 2018 ಜನವರಿಯಿಂದ ಆಸ್ಟ್ರೇಲಿಯಾದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಕನ್ನಡ ಕಲಿಯಲಿದ್ದಾರೆ. ಕರ್ನಾಟಕದಲ್ಲಿ ಹುಟ್ಟಿ ಕನ್ನಡ ಅಂದ್ರೆ ಮೂಗು ಮುರಿಯೋ ಜನಕ್ಕೆ ಮೆಲ್ಬೋರ್ನ್ ನಿಜಕ್ಕೂ ಮಾದರಿಯಾಗಿದೆ.