ಕಾರ್ಕಳ,ಅ 19(SM): ಸಿಡಿಲು ಬಡಿದು ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ಕೈಕಂಬದ ಬಳಿ ನಡೆದಿದೆ. ಮೃತರನ್ನು ಕಾರ್ಕಳ ನಿವಾಸಿ ಪ್ರಶಾಂತ್ ಪೈ(36) ಎಂದು ಗುರುತಿಸಲಾಗಿದೆ.
ದಾವಣಗೆರೆಯಲ್ಲಿ ವಾಸವಾಗಿದ್ದ ಪ್ರಶಾಂತ್ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದರು. ನವರಾತ್ರಿಯ ಸಲುವಾಗಿ ಕಾರ್ಕಳದ ಸಂಬಂಧಿಕರ ಮನೆಗೆ ಬಂದಿದ್ದು ಉಡುಪಿ ಬೈರಂಪಳ್ಳಿ ಹರಿಕಂಡಿಕೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ವಾಪಸ್ಸಾಗಿದ್ದಾರೆ. ದಾರಿ ಮಧ್ಯೆ ಕೈಕಂಬ ಬಳಿಯ ಅಂಗಡಿಯೊಂದರಲ್ಲಿ ಚಹಾ ಸೇವಿಸಲೆಂದು ತೆರಳಿದ್ದ ವೇಳೆ ಸಿಡಿಲು ಬಡಿದು ಘಟನೆ ಸಂಭವಿಸಿದೆ.
ಇದೇ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ನಾಲ್ವರಿಗೂ ಸಿಡಿಲು ಬಡಿದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಾರ್ಕಳ ತಹಶೀಲ್ದಾರ್ ಮಹಮ್ಮದ್ ಇಸಾಕ್, ಕಾರ್ಕಳ ಕಸಬಾ ಗ್ರಾಮದ ವಿಎ ಶಿವಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.