ಮಂಗಳೂರು,ಅ19(SS): ನಗರದಲ್ಲಿ ಟ್ರಾಫಿಕ್ ಪೊಲೀಸರೊಬ್ಬರು ರಾತ್ರಿ ವೇಳೆ ಕೆಟ್ಟು ನಿಂತಿದ್ದ ಕಾರನ್ನು ತಳ್ಳಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ದೇವರಾಜ್ ಕರ್ತವ್ಯಪ್ರಜ್ಞೆ ಮೆರೆದ ಟ್ರಾಫಿಕ್ ಪೊಲೀಸ್. ನಗರದ ನಂತೂರ್ ವೃತ್ತ ಸಮೀಪ ಈ ಘಟನೆ ನಡೆದಿದ್ದು, ಟ್ರಾಫಿಕ್ ನಲ್ಲಿ ಕೆಟ್ಟು ನಿಂತ ಕಾರನ್ನು ತಳ್ಳಿ ಕಾರಿನ ಸವಾರರಿಗೆ ದೇವರಾಜ್ ಸಹಾಯ ಮಾಡಿದ್ದಾರೆ.
ನಂತೂರ್ ಸರ್ಕಲ್ ಬಳಿ ಟ್ರಾಫಿಕ್ನಲ್ಲಿಯೇ ಕಾರು ಕೆಟ್ಟು ನಿಂತಿತ್ತು. ತಕ್ಷಣ ಇದನ್ನು ಟ್ರಾಫಿಕ್ ಕಂಟ್ರೋಲ್ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿ ದೇವರಾಜ್ ಗಮನಿಸಿದ್ದು, ಕಾರನ್ನು ಒಬ್ಬರೇ ಸುಮಾರು 200 ಮೀಟರ್ ಬದಿಗೆ ತಳ್ಳಿ ಮಾನವೀಯತೆ ಮೆರೆದಿದ್ದಾರೆ.
ಇದೀಗ ಕರ್ತವ್ಯಪ್ರಜ್ಞೆ ಮೆರೆದ ಟ್ರಾಫಿಕ್ ಪೊಲೀಸ್ ದೇವರಾಜ್ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.