ಮೈಸೂರು, ಅ.19(SS): ಮೈಸೂರು ಸೇರಿದಂತೆ ಸಮಸ್ತ ನಾಡಿನ ಜನತೆ ಇಂದು ಜಂಬೂಸವಾರಿಗೆ ಕಾಯುತ್ತಿದ್ದರೆ, ಇತ್ತ ವಿಜಯದಶಮಿ ದಿನವೇ ಪ್ರಮೋದಾ ದೇವಿ ಅವರ ತಾಯಿ ಇಹಲೋಕ ತ್ಯಜಿಸಿದ್ದಾರೆ.
ಮೈಸೂರು ಮನೆತನದ ರಾಜವಂಶಸ್ಥೆ ಪ್ರಮೋದಾ ದೇವಿ ಅವರ ತಾಯಿ ಪುಟ್ಟಚಿನ್ನಮ್ಮಣಿ(98) ಅವರು ನಿಧನರಾಗಿದ್ದಾರೆ.
ಪುಟ್ಟಚಿನ್ನಮ್ಮಣಿ ಅವರು ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಅರಮನೆಯಲ್ಲಿ ಜಂಬೂಸವಾರಿಯ ಹಬ್ಬದ ವಾತಾವರಣ ಕಂಗೊಳಿಸುತ್ತಿತ್ತು. ಆದರೆ ಈಗ ಪುಟ್ಟಚಿನ್ನಮ್ಮಣಿ ಅವರ ಸಾವಿನಿಂದ ಅರಮನೆಯಲ್ಲಿ ಸೂತಕದ ವಾತಾವರಣ ಆವರಿಸಿಕೊಂಡಿದೆ.