ಮಂಗಳೂರು, ಆ.01 (DaijiworldNews/HR): ಕೊರೊನಾ ಕಾರಣದಿಂದ ರದ್ದುಗೊಂಡಿದ್ದ ಪರೀಕ್ಷೆಗಳು ಯಥಾಪ್ರಕಾರವಾಗಿ ಆ. 2ರಿಂದ 14ವರೆಗೆ ನಡೆಯಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ.ಎಲ್. ಧರ್ಮ ಸ್ಪಷ್ಟನೆ ನೀಡಿದ್ದಾರೆ.
ಸಾಂಧರ್ಭಿಕ ಚಿತ್ರ
ಈ ಕುರಿತು ದೈಜಿವರ್ಲ್ಡ್ ಗೆ ಮಾಹಿತಿ ನೀಡಿದ ಅವರು, ಕೊರೊನಾ ಸೋಂಕು ಹಿನ್ನಲೆಯಲ್ಲಿ ರದ್ದುಗೊಂಡಿದ್ದ ಪರೀಕ್ಷೆಗಳು ವೇಳಾ ಪಟ್ಟಿಯಂತೆ ಯಥಾಪ್ರಕಾರವಾಗಿ ನಡೆಯಲಿದೆ ನಡೆಯಲಿದೆ" ಎಂದರು.
ಇನ್ನು ಕೇರಳದ ವಿದ್ಯಾರ್ಥಿಗಳು ಸೇರಿದಂತೆ ಯಾರೂ ಕೂಡ ಆತಂಕ ಪಡಬೇಕಿಲ್ಲ. ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೆ ಇರುವವರಿಗೆ ಪ್ರತ್ಯೇಕ ಪರೀಕ್ಷೆ ನಡೆಸಲಾಗುವುದು, ಅದಕ್ಕೆ ದಿನಾಂಕವನ್ನು ಶೀಘ್ರದಲ್ಲೇ ನೀಡಲಾಗುವುದು. ಗಡಿ ಪ್ರದೇಶದ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆ ವಿಶೇಷ ದಿನದಂದು ಮಾಡಲು ನಿರ್ಧರಿಸಿದ್ದೇವೆ. ಗಡಿ ಹಾಗೂ ಕೊರೊನಾ ಸಮಸ್ಯೆಯಿಂದ ಪರೀಕ್ಷೆಗ ಗೈರಾದವರಿಗೆ ವಿಶೇಷ ಪರೀಕ್ಷೆ ಮಾಡಲಾಗುವುದು. ಇತರ ವಿದ್ಯಾರ್ಥಿಗಳಿಗೆ ನಿಗದಿಯಾದಂತೆ ಪರೀಕ್ಷೆ ನಡೆಸಲಾಗುವುದು. ಯಾವುದೇ ಆತಂಕವಿಲ್ಲದೆ ಪರೀಕ್ಷೆಯನ್ನು ಎದುರಿಸಿ" ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಧರ್ಮ ತಿಳಿಸಿದ್ದಾರೆ.