ಮಂಗಳೂರು,ಜು 31(DaijiworldNews/MS):ಜಿಲ್ಲೆಯ ಕೋವಿಡ್-19 ಲಸಿಕಾ ಅಭಿಯಾನದಡಿ ಇಲ್ಲಿಯವರೆಗೆ ಒಟ್ಟು 11.68,381 ಮಂದಿ ಲಸಿಕಾ ಫಲಾನುಭವಿಗಳು ಲಸಿಕೆ ಪಡೆದಿದ್ದಾರೆ.
ಇಲ್ಲಿಯವರೆಗೆ ಮೊದಲನೆಯ ಡೋಸ್ ಲಸಿಕೆ ಒಟ್ಟು 8,98,646 ಫಲಾನುಭವಿಗಳಿಗೆ ಹಾಗೂ ಎರಡನೇ ಡೋಸ್ ಲಸಿಕೆಯನ್ನು ಒಟ್ಟು 2,69,735 ಮಂದಿಗೆ ನೀಡಲಾಗಿದೆ.
ಲಸಿಕೆ ಪಡೆದವರಲ್ಲಿ 18 ರಿಂದ 44 ವರ್ಷದ ವಯೋಮಾನದವರ ಗುರಿಯಲ್ಲಿ ಮೊದಲನೆಯ ಡೋಸ್ 32.46% ಹಾಗೂ ಎರಡನೇ ಡೋಸ್ 5.01% ನೀಡಲಾಗಿದೆ. 45 ವರ್ಷದಿಂದ 59 ವರ್ಷದೊಳಗಿನ ಫಲಾನುಭವಿಗಳ ಗುರಿಯಲ್ಲಿ ಪ್ರಥಮ ಡೋಸ್ 65.53% ಹಾಗೂ ಎರಡನೇ ಡೋಸ್ 38.65% ನೀಡಲಾಗಿದೆ.
60 ವರ್ಷ ಮೇಲ್ಪಟ್ಟವರ ಗುರಿಯಲ್ಲಿ ಪ್ರಥಮ ಡೋಸ್ 92.83% ಹಾಗೂ ಎರಡನೇ ಡೋಸ್ 55.54%, ನೀಡಲಾಗಿದೆ.
ಜು.30ರ ಶುಕ್ರವಾರ ಜಿಲ್ಲೆಯಲ್ಲಿ ಒಟ್ಟು 6125 ಮಂದಿ ಲಸಿಕೆಯನ್ನು ಪಡೆದಿದ್ದಾರೆ ಎಂದು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.