ಉಡುಪಿ, ಜು 30 (DaijiworldNews/MS): ವಾಹನಗಳು ಪರವಾನಿಗೆ ಇಲದೆ ಹಾಗೂ ರಹದಾರಿ ನಿಯಮ ಉಲ್ಲಂಘನೆ ಮಾಡಿ ಸಂಚರಿಸುವ ಬಸ್ ಗಳನ್ನು ಮುಟ್ಟುಗೋಲು ಹಾಕಿಕೊಲ್ಳಲಾಗುವುದೆಂದು ಈಗಾಗಲೇ ಮುನ್ನೆಚ್ಚರಿಕೆ ನೀಡಿಲಾಗಿದ್ದರೂ ಸಹ ಕಾನೂನು ಉಲ್ಲಂಘನೆ ಮಾಡಿ ಸಂಚರಿಸುತ್ತಿದ್ದ ಕೆ ಎಸ್ ಆರ್ ಟಿಸಿ ಬಸ್ ಅನ್ನು ಜು.30 ಗುರುವಾರ ಮುಟ್ಟುಗೋಲು ಹಾಕಿಕೊಳ್ಳಲಾಯಿತು.
ಯಾವುದೇ ಪ್ರಯಾಣಿಕ ವಾಹನವು ರಹದಾರಿ ಉಲ್ಲಂಘಿಸಿ , ತೆರಿಗೆ ಪಾವತಿಸದೆ ಸಾರ್ವಜನಿಕರನ್ನು ಕೊಂಡೊಯ್ಯದಂತೆ ಎಲ್ಲಾ ಬಸ್ ಮಾಲಕರಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ ಗಂಗಾಧರ ಎಚ್ಚರಿಕೆ ನೀಡಿದ್ದಾರೆ.