ಮಂಗಳೂರು, ಜು. 29 (DaijiworldNews/SM): ಜಿಲ್ಲೆಯ ಕೋವಿಡ್-19 ಲಸಿಕಾ ಅಭಿಯಾನದಡಿ ಇದೂವರೆಗೂ ಒಟ್ಟು 1,62,316 ಮಂದಿಗೆ ಲಸಿಕೆ ನೀಡಲಾಗಿದೆ. ಮೊದಲನೆಯ ಡೋಸ್ ಲಸಿಕೆಯನ್ನು ಈವರೆಗೆ ಒಟ್ಟು 8,94,571 ಫಲಾನುಭವಿಗಳಿಗೆ ಹಾಗೂ ಎರಡನೇ ಡೋಸ್ ಲಸಿಕೆಯನ್ನು ಒಟ್ಟು 2,67,745 ಮಂದಿಗೆ ನೀಡಲಾಗಿದೆ.
ಲಸಿಕೆ ಪಡೆದವರಲ್ಲಿ 18ರಿಂದ 44 ವರ್ಷದ ವಯೋಮಾನದವರ ಗುರಿಯಲ್ಲಿ ಮೊದಲನೆಯ ಡೋಸ್ ಶೇ. 32.35 ಹಾಗೂ ಎರಡನೇ ಡೋಸ್ ಶೇ. 4.83 ನೀಡಲಾಗಿದೆ.
45 ವರ್ಷದಿಂದ 59 ವರ್ಷದೊಳಗಿನ ಫಲಾನುಭವಿಗಳ ಗುರಿಯಲ್ಲಿ ಪ್ರಥಮ ಡೋಸ್ ಅನ್ನು ಶೇ. 65.40 ಹಾಗೂ ಎರಡನೇ ಡೋಸ್ ಶೇ. 38.58 ನೀಡಲಾಗಿದೆ. 60 ವರ್ಷ ಮೇಲ್ಪಟ್ಟವರ ಗುರಿಯಲ್ಲಿ ಪ್ರಥಮ ಡೋಸ್ ಶೇ. 92.70 ಹಾಗೂ ಎರಡನೇ ಡೋಸ್ ಶೇ. 55.52 ಮಂದಿಗೆ ನೀಡಲಾಗಿದೆ.
ಜು.29 ರಂದು ಜಿಲ್ಲೆಯಲ್ಲಿ ಒಟ್ಟು 3256 ಮಂದಿ ಲಸಿಕೆ ಪಡೆದಿದ್ದಾರೆ. ಸರ್ಕಾರಿ ಅಲ್ಲದೆ ಖಾಸಗಿ ಆಸ್ಪತ್ರೆಗಳಲ್ಲೂ ಕೂಡಾ ಸರ್ಕಾರ ನಿಗದಿಪಡಿಸಿರುವ ದರದಂತೆ ಕೋವ್ಯಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್ ಲಸಿಕೆಗಳನ್ನು ನಗರದ ಎಜೆ, ಕೆಎಂಸಿ ಅತ್ತಾವರ, ಕೆಎಂಸಿ ಜ್ಯೋತಿ, ಯನಪೋಯ ಮೆಡಿಕಲ್ ಕಾಲೇಜು, ಯನಪೋಯ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.