ಬಂಟ್ವಾಳ, ಜು 28 (DaijiworldNews/MS): ಇಲ್ಲಿನ ಮಣಿಹಳ್ಳ ಸರಪಾಡಿ ರಸ್ತೆಯ ಪೆರಿಯಪಾದೆ ಎಂಬಲ್ಲಿ ಆಟೋರಿಕ್ಷಾವೊಂದು ಪಲ್ಟಿಯಾದ ಪರಿಣಾಮ ಓರ್ವ ಮೃತಪಟ್ಟು 7 ಮಂದಿ ಗಾಯಗೊಂಡ ಘಟನೆ ಜು.28ರ ಬುಧವಾರ ಬೆಳಿಗ್ಗೆ ನಡೆದಿದೆ.
ಅಪಘಾತದಲ್ಲಿ ಮೃತರಾದವರನ್ನು ವಲೆಂಗೂರು ನಿವಾಸಿ ಫ್ರಾನ್ಸಿಸ್ ಸುವಾರಿಸ್ (85) ಎಂದು ಗುರುತಿಸಲಾಗಿದೆ. ರಿಕ್ಷಾದಲ್ಲಿ ಸರಪಾಡಿಯಿಂದ ಬಂಟ್ವಾಳ ಕಡೆಗೆ ಹಲವು ಮಂದಿ ಪ್ರಯಾಣಿಕರನ್ನು ಕೂರಿಸಿಕೊಂಡು ಬಂಟ್ವಾಳ ಕಡೆಗೆ ಆಗಮಿಸುವ ವೇಳೆ ಪರಿಯಪಾದೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆ ಗೆ ದಾಖಲಾದರೆ, ಅಲ್ಪಸ್ವಲ್ಪ ಗಾಯಗೊಂಡ ಉಳಿದವರು ಬಂಟ್ವಾಳ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.